ಇತ್ತೀಚಿಗೆ ನಿಧನರಾದ ಬೈಕಂಪಾಡಿ ಅಂಗರಗುಂಡಿ ನಿವಾಸಿಯಾಗಿದ್ದ ಮರ್ಹೂಂ ಮಾಮು ಬ್ಯಾರಿಯವರ ಮಗ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ,ಕೊಡುಗೈ ದಾನಿಯೂ, ಒಂದನೇ ದರ್ಜೆಯ ಕಾಂಟ್ರಾಕ್ಟರ್ ಆಗಿದ್ದ ಕಾಟಿಪಳ್ಳ ಏರಡನೇ ಬ್ಲಾಕ್ ನಿವಾಸಿಯಾಗಿರುವ ಬಿ.ಕೆ.ಇಸ್ಮಾಯಿಲ್ ಹಾಜಿ (ಬಳ್ಳಾರಿ )ಯವರ ಮನೆಗೆ ಕರ್ನಾಟಕ ವಖ್ಫ್ ಮಂಡಳಿ ಅಧ್ಯಕ್ಷರಾದ ಮೌಲಾನಾ ಎನ್.ಕೆ. ಎಂ. ಶಾಫಿ ಸಹದಿಯವರು ಭೇಟಿ ನೀಡಿ ಮೃತರ ಮಘ್ಫಿರತ್‌ಗಾಗಿ ಪ್ರಾರ್ಥಿಸಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂಧರ್ಭದಲ್ಲಿ ದ.ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿ. ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ.ಕ ಜಿಲ್ಲಾ ವಖ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯರೂ, ಪ್ರತಿಷ್ಠಿತ ಕಾಜೂರ್ ದರ್ಗಾ ಶರೀಫಿನ ಪ್ರಧಾನ ಕಾರ್ಯದರ್ಶಿಯೂ ಆದ ಜೆ.ಎಚ್. ಅಬೂಬಕರ್ ಸಿದ್ದೀಕ್ ಕಾಜೂರ್, ಕಾಟಿಪಳ್ಳ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷರಾದ ಜನಾಬ್ ಸಲೀಂ ರಫಿ,ರಾಜ್ಯ ವಖ್ಫ್ ಮಂಡಳಿ ACO ಬಿ.ಎ.ಖಾದರ್ ಶಾ, ನ್ಯಾಯವಾದಿ ಮುಕ್ತಾರ್ ಅಹ್ಮದ್, ವಖ್ಫ್ ಸದಸ್ಯರಾದ ಬಿ.ಕೆ. ಸಿರಾಜುದ್ದೀನ್, ಹಾರಿಸ್ ಬೈಕಂಪಾಡಿ, ಹಿದಾಯತ್, ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.