ಉಜಿರೆ: SYS ಉಜಿರೆ ಸರ್ಕಲ್ ವತಿಯಿಂದ ಭಾರತದ 76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎಂಡೋಸಲ್ಫಾನ್ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವು ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ದಲ್ಲಿ ದಿನಾಂಕ ಆಗಸ್ಟ್ 16 ರಂದು ನಡೆಯಿತು.
ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು SYS ಉಜಿರೆ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ SMA ಕರ್ನಾಟಕ ರಾಜ್ಯಾಧ್ಯಕ್ಷರಾದ ಬಹು ಸಯ್ಯಿದ್ ಇಸ್ಮಾಯಿಲ್ ತಂಙಳ್ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮುಂದುವರಿಯಲಿ ಎಂದು ಶುಭಹಾರೈಸಿದರು. ಉದ್ಯಮಿ ಪ್ರೇಮ್ ರಾಜ್, ರೋಷನ್ ಸಿಕ್ವೇರಾ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ SYS ಉಜಿರೆ ಸರ್ಕಲ್ ನಾಯಕರಾದ ಹಾತಿಬ್ ಕಕ್ಕಿಂಜೆ, ಅಶ್ರಫ್,ಖಾದರ್ ಆದಂ ಬೆಳಾಲು, ಹಕೀಂ ಮದನಿ ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಅಧ್ಯಕ್ಷರಾದ ಬಹು ಹೈದರ್ ಮದನಿ ಉಜಿರೆ, ಇಬ್ರಾಹಿಂ ಹಾಜಿ ಅತ್ತಾಜೆ ಭಾಗವಹಿಸಿದ್ದರು. SYS ಸರ್ಕಲ್ ನಾಯಕರಾದ ಹಾರಿಸ್ ಉಜಿರೆ ಸ್ವಾಗತಿಸಿ ಸಂಸ್ಥೆಯ ಮೇಲ್ವಿಚಾರಾದ ಮಲ್ಲಿಕಾ ರವರು ವಂದಿಸಿದರು.