janadhvani

Kannada Online News Paper

ಕೆ.ಸಿ.ಎಫ್, ಯು.ಎ.ಇ ವತಿಯಿಂದ ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮ

"ವೈವಿಧ್ಯತೆ ಭಾರತದ ವೈಶಿಷ್ಟ್ಯತೆ" ಎಂಬ ಘೋಷವಾಕ್ಯದಲ್ಲಿ “We the people of India”ಕಾರ್ಯಕ್ರಮ

ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಯು.ಎ.ಇ ರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗವು 2023 ಆಗಸ್ಟ್ 16 ಬುಧವಾರ ರಾತ್ರಿ 9:00 ಕ್ಕೆ ಆನ್ಲೈನ್ ಮೂಲಕ “ವೈವಿಧ್ಯತೆ ಭಾರತದ ವೈಶಿಷ್ಟ್ಯತೆ” ಎಂಬ ಘೋಷವಾಕ್ಯದಲ್ಲಿ “We the people of India”ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

ಬಹು ಇಬ್ರಾಹಿಮ್ ಸಖಾಫಿ ಕೆದಂಬಾಡಿ, ಅಧ್ಯಕ್ಷರು ಕೆ. ಸಿ. ಎಫ್. ಯು.ಎ.ಇ. ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ Adv. ಪುನೀತ್ ಅಪ್ಪು, ವಕೀಲರು, ಬೆಂಗಳೂರು ಭಾಗವಹಿಸಿ ಭಾರತ ಸಂವಿಧಾನದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದಾರೆ. ಇನ್ನೋರ್ವ ಅತಿಥಿ ಬಹು ಹಾಫಿಝ್ ಸುಫ್ಯಾನ್ ಸಖಾಫಿ, ಅಧ್ಯಕ್ಷರು SSF ಕರ್ನಾಟಕ ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಭಾಷಣಗೈಯಲಿರುವರು. ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ – ಅಂತರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಅನಿವಾಸಿ ಕನ್ನಡಿಗರೆಲ್ಲರೂ ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೆ.ಸಿ. ಎಫ್. ಯು.ಎ.ಇ. ಆಡಳಿತ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆನ್ಲೈನ್ ಮೂಲಕ ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ಯು.ಎ.ಇ. ಯ ಕೆ.ಸಿ.ಎಫ್ ಸದಸ್ಯರು ಮತ್ತು ಯು.ಎ.ಇ. ಯಲ್ಲಿರುವ ಕನ್ನಡಿಗರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಬರಹಗಾರರು ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ಸೂಚಿಸಿರುವ ನಿಬಂಧನೆಗಳಿಗನುಸಾರ ತಮ್ಮ ಪ್ರಬಂಧವನ್ನು ಸಮರ್ಪಿಸುವಂತೆ ಕೋರಲಾಗಿದೆ.
https://forms.gle/gwJ4aLFk6wCW6EfK9

ಹೆಚ್ಚಿನ ವಿವರ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.:00971-567518700

error: Content is protected !! Not allowed copy content from janadhvani.com