janadhvani

Kannada Online News Paper

ಹರಂ ಮಸೀದಿ ಮತ್ತು ಪರಿಸರದಲ್ಲಿ ಮಾಸ್ಕ್ ಧರಿಸಿ- ಜನರಲ್ ಸೆಕ್ಯುರಿಟಿ ಸಲಹೆ

ಸೌದಿ ಅರೇಬಿಯಾದ ಸಾಮಾನ್ಯ ಬಧ್ರತಾ ವಿಭಾಗವು ಈ ಬಗ್ಗೆ ಟ್ವೀಟ್ ಮಾಡಿದೆ

ರಿಯಾದ್: ಪವಿತ್ರ ಕೇಂದ್ರಗಳಾದ ಮಕ್ಕಾದ ಮಸ್ಜಿದುಲ್ ಹರಾಂ ಮತ್ತು ಮದೀನಾದ ಮಸ್ಜಿದುನ್ನಬವಿಗೆ ಭೇಟಿ ನೀಡುವವರು ಮಾಸ್ಕ್ ಧರಿಸುವ ಮೂಲಕ ಆರೋಗ್ಯ ಕಾಪಾಡುವಂತೆ ಸೌದಿ ಜನರಲ್ ಸೆಕ್ಯುರಿಟಿ ಸಲಹೆ ನೀಡಿದೆ.

ಈ ಬಗ್ಗೆ ಟ್ವಿಟರ್ ಮೂಲಕ ಅಭಿಯಾನ ನಡೆಸಿರುವ ಸೌದಿ ಸಾಮಾನ್ಯ ಭದ್ರತಾ ವಿಭಾಗವು

“ಅಲ್-ರಹಮಾನ್ ಅತಿಥಿಗಳು..
ಮಕ್ಕಾ ಮತ್ತು ಮದೀನಾದ ಎರಡು ಪವಿತ್ರ ಮಸೀದಿಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖವಾಡವನ್ನು ಧರಿಸುವುದು ನಿಮ್ಮನ್ನು ಮತ್ತು ಇತರರನ್ನು ರೋಗದ ಸೋಂಕಿನಿಂದ ರಕ್ಷಿಸುತ್ತದೆ”

ಎಂದು ಟ್ವೀಟ್ ಮಾಡಿದೆ.

ಇದು ಕಡ್ಡಾಯ ಅದೇಶ ಅಲ್ಲದಿದ್ದರೂ, ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಈ ಸಲಹೆಯನ್ನು ಯಾತ್ರಾರ್ಥಿಗಳು ಪಾಲಿಸುವುದು ಅಗತ್ಯವಾಗಿದೆ.

error: Content is protected !! Not allowed copy content from janadhvani.com