janadhvani

Kannada Online News Paper

ಡ್ರಗ್ಸ್ ಮುಕ್ತ ಕುದ್ರೋಳಿ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ಬೃಹತ್ ಜನಜಾಗೃತಿ ರ‌್ಯಾಲಿ

ಡ್ರಗ್ಸ್ ಮಾರಾಟ ಹಾಗೂ ಸೇವನೆಯವರಿಗೆ ಒಕ್ಕೊರಲ ಎಚ್ಚರಿಕೆಯ ಕರೆಘಂಟೆ

ಮಂಗಳೂರು: ಇತ್ತೀಚಿಗೆ ಮಿತಿ ಮೀರಿದ ಡ್ರಗ್ಸ್ ಮಾರಾಟ ಮತ್ತು ಸೇವನೆಯಿಂದ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ‌ವಲಯದಲ್ಲಿ ಬಾರೀ ಆಕ್ರೋಶದ ಅಲೆಯೆದ್ದಿದೆ. ಕುದ್ರೋಳಿಯಲ್ಲಿ ಐದು ಮಸೀದಿ ಆಡಳಿತ ಮಂಡಳಿ,ಸಂಘ ಸಂಸ್ಥೆಗಳ ಪ್ರತಿನಿಧಿಯನ್ನೊಳಗೊಂಡ ಮುಸ್ಲಿಂ ಐಕ್ಯತ ವೇದಿಕೆ* ಯು ಕಳೆದ ಒಂದು‌ತಿಂಗಳಿನಿಂದ
ಡ್ರಗ್ಸ್ ಮುಕ್ತ ಕುದ್ರೋಳಿ, ಯುವ ಪೀಳಿಗೆಯ ರಕ್ಷಣೆಯೇ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಳೆದ ವಾರದಲ್ಲಿ ಐದು ಮಸೀದಿಯ ವ್ಯಾಪ್ತಿಯ ಸುಮಾರು 2000 ಸಾವಿರದಷ್ಟು ಮನೆ ಮನೆಗೆ ನಾಯಕರು‌ ನಾಗರಿಕರ ಸಹಕಾರದೊಂದಿಗೆ ತೆರಳಿ ಕರಪತ್ರ ವಿತರಣೆ ಮೂಲಕ ಜಾಗೃತಿ ಮೂಡಿಸಲಾಗಿದೆ.

ಇವತ್ತು ಸಾಯಂಕಾಲ 5.00 ಕ್ಕೆ ಸರಿಯಾಗಿ ಜಾಮಿಅ ಮಸೀದಿ ಕುದ್ರೋಳಿ ಯಿಂದ ಕಂಡತ್ ಪಳ್ಳಿ ಜುಮಾ ಮಸೀದಿಯವರೆಗೆ ಬೃಹತ್ ಜನಜಾಗೃತಿ ರ‌್ಯಾಲಿ ಜನಾಬ್ ಮುಹಮ್ಮದ್ ಯಾಸೀನ್ ಅಧ್ಯಕ್ಷ ತೆಯಲ್ಲಿ ನಡೆಯಿತು.

ಜಾಮಿಅ ಮಸೀದಿ ಇಮಾಮ್ ಮೌಲಾನ ಮನ್ನಾನ್ ಸಾಬ್ ದುಆದೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮ ದಲ್ಲಿ ಪ್ರಧಾನ ಕಾರ್ಯದರ್ಶಿ ಜನಾಬ್ ಹಾಜಿ ಬಿ ಅಬೂಬಕ್ಕರ್ ‌ಸ್ವಾಗತಿಸಿ ದಿಕ್ಸೂಚಿ ಬಾಷಣ ಮಾಡಿದ ಡಿವೈಎಫ್ಐ ರಾಜ್ಯ ಧ್ಯಕ್ಷರಾದ ಜನಾಬ್ ಮುನೀರ್ ಕಾಟಿಪಳ್ಳ ಮಾತಾಡಿ ಡ್ರಗ್ಸ್ ಮುಕ್ತ ಕುದ್ರೋಳಿ ಅಭಿಯಾನಕ್ಕೆ ಇಡೀ ಊರಿಗೆ ಊರೇ ಹೋರಾಟದಲ್ಲಿ ನಿರತಾರಾಗಿದ್ದು ಇಡೀ ಜಿಲ್ಲೆಗೆ ಮಾದರಿಯಾಗಲಿದೆ .

ನಂತರ ಹಲವು ಎಚ್ಚರಿಕೆ ಯ ಘೋಷನೆಗಳೊಂದಿಗೆ ಜಾಥವು ಸಾಗಿತು.ಕಾರ್ಯಕ್ರಮ ದ ಕೊನೆಯಲ್ಲಿ ಡ್ರಗ್ಗರುಗಳಿಗೆ ಸ್ಪಷ್ಟ ಎಚ್ಚರಿಕೆ ಕಾರ್ಪೊರೇಟರ್ ಶಂಸುದ್ದೀನ್ ಎಚ್ ಬಿಟಿ ಐಕ್ಯತೆ ವೇದಿಕೆ ಪರವಾಗಿ ನೀಡಿದರು.ಜಾಥದಲ್ಲಿ ಐದು ಮಸೀದಿ ಖತೀಬರುಗಳಾದ ಜುಬೈರ್ ಮೌಲಾನಾ ಜಾಮಿಯ ಮಸೀದಿ, ಕೆ ಎಸ್ ರಿಯಾಝ್ ಪೈಝಿ ನಡುಪಳ್ಳಿ, ಮುಹಮ್ಮದ್ ಬಾಖವಿ ಮೊಹ್ದಿನ್ ಪಳ್ಳಿ, , ಅಹ್ಮದ್ ಅಲಿ ಖಾಸಿಮಿ ಸಲಫಿ ಮಸ್ಜಿದ್, ಪಿ ಎ ಮುಹಮ್ಮದ್ ರಫೀಕ್ ಮದನಿ ಕಂಡತ್ ಪಳ್ಳಿ
ಹಾಗೂ ಜನಾಬ್ ಮಕ್ಬೂಲ್ ಜಾಮಿಯ ಕೋಶಾಧಿಕಾರಿ
ಜನಾಬ್ ಎಂ ಅಝೀಝ್ ಕುದ್ರೋಳಿ ಸಂಚಾಲಕರು
ಜನಾಬ್ ಎಸ್.ಎ. ಖಲೀಲ್
ಉಪಾಧ್ಯಕ್ಷರು
ಜನಾಬ್ ಶಮೀಮ್ ಅಹ್ಮದ್ ಅಧ್ಯಕ್ಷ ರು ಕಂಡತ್ ಪಳ್ಳಿ
ಜನಾಬ್ ಮಕ್ಬೂಲ್ ಅಹ್ಮದ್ ಕಾರ್ಯದರ್ಶಿ
ಜನಾಬ್ ಹಾರಿಸ್ ಕುದ್ರೋಳಿ ಸಹ ಕಾರ್ಯದರ್ಶಿ
ಜನಾಬ್ ಎನ್ ಕೆ ಅಬೂಬಕ್ಕರ್ ಸಹ ಕಾರ್ಯದರ್ಶಿ
ಜನಾಬ್ ಮುಝೈರ್ ಕುದ್ರೋಳಿ ಸಹ ಕಾರ್ಯದರ್ಶಿ
ಸಮಿತಿ ಸದಸ್ಯರುಗಳಾದ
ಮಾಜಿ ಮೇಯರ್ ಕೆ ಅಶ್ರಫ್
ಜನಾಬ್ ಮುಸ್ತಾಕ್ ಕುದ್ರೋಳಿ
ಜನಾಬ್ ಅಬ್ದುಲ್ ಲತೀಫ್ ಕ್ರಿಸ್ಟಲ್
ಜನಾಬ್ ಅಬ್ದುಲ್ ವಹಾಬ್
ಜನಾಬ್ ಬಿ ಎ ಇಸ್ಮಾಯಿಲ್ ಉಪಸ್ಥಿತರಿದ್ದರು. ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com