ಪುತ್ತೂರು: ಹಿರಿಯ ಧಾರ್ಮಿಕ ಮುಖಂಡರೂ, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಬನ್ನೂರು ಬಿ. ಮುಹ್ಯಿದ್ದೀನ್ ಕುಟ್ಟಿ ಹಾಜಿಯವರು ಇಂದು ನಿಧನ ಹೊಂದಿದರು. ಅವರು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಬನ್ನೂರು ಬದ್ರಿಯಾ ಜುಮುಅ ಮಸೀದಿಯಲ್ಲಿ ಹಲವಾರು ವರ್ಷ ಕಾರ್ಯದರ್ಶಿಯಾಗಿ , ಅಧ್ಯಕ್ಷರಾಗಿ ಹಾಗೂ ಸುನ್ನತ್ ಜಮಾಅತ್ತಿನ ಸಂಘ, ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದರು.
ಇವರು, ಸುನ್ನೀ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇಬ್ರಾಹಿಂ ಪಾಪ್ಲಿ ಬನ್ನೂರು,ಜಿದ್ದಾ ಇವರ ಸಹೋದರಾಗಿದ್ದಾರೆ.
ಮೃತ ಅಣ್ಣನ ಹೆಸರಿನಲ್ಲಿ ಎಲ್ಲರೂ ಸಾಧ್ಯವಾದಷ್ಟು ಖುರ್’ಆನ್ ಓದಿ, ತಹ್‌ಲೀಲ್ ಹೇಳಿ ಹದಿಯಮಾಡಿ ಮಯ್ಯಿತ್ ನಮಾಝ್ ನಿರ್ವಹಿಸಿ ಅವರ ಪರಲೋಕ ವಿಜಯಕ್ಕೆ ದುಆಃ ಮಾಡಬೇಕೆಂದು ಇಬ್ರಾಹಿಂ ಪಾಪ್ಲಿ ಬನ್ನೂರು @ ಜಿದ್ದಾ ವಿನಂತಿಸಿದ್ದಾರೆ.