janadhvani

Kannada Online News Paper

ವೈದಿಕರು ಯಷ್ಪಾಲ್, ಶರಣ್ ರನ್ನು ಮುಸ್ಲಿಮರ ವಿರುದ್ಧ ಛೂ‌ ಬಿಡುತ್ತಿದ್ದಾರೆ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಮತೀಯ ವಿದ್ವೇಷ ಭಾಷಣ ಮಾಡುವ ಇಂತಹ ಕೋಲು ನಾಯಕರ ವಿರುದ್ಧ ಪೊಲೀಸರು ಮತೀಯ ನಿಂದನೆ ಪ್ರಕರಣ ದಾಖಲಿಸಿ ಬಂಧಿಸಬೇಕಿದೆ

ಮಂಗಳೂರು: ಉಡುಪಿಯ ಖಾಸಗಿ ಕಾಲೇಜಿನಲ್ಲಿನ ಮೊಬೈಲ್ ಚಿತ್ರೀಕರಣ ಪ್ರಕರಣವು ಈಗಾಗಲೇ ಒಂದು ತಾರ್ಕಿಕ ಅಂತ್ಯ ಕಂಡಿದ್ದು, ಸಂಘ ಪರಿವಾರವು ಮುಗಿದು ಹೋದ ಈ ಘಟನೆಗೆ, ಮತೀಯ ವಿದ್ವೇಷ ಸೃಷ್ಟಿಸಿ ಕೋಮು ಗಲಭೆ ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಪರಾಜಿತಗೊಂಡ ಸಂಘ ಪರಿವಾರ ಪ್ರಸ್ತುತ ಇಂತಹ ನಗಣ್ಯ ಘಟನೆಯನ್ನು ಉದ್ದಕ್ಕೆ ಎಳೆದು ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ. ಪ್ರಕರಣವನ್ನು ಕೋಮೀಕರಣ ಗೊಳಿಸಲು ವೈದಿಕ ವರ್ಗವು ಶತಾಯ ಗತಾಯ ಶ್ರಮಿಸುತ್ತಿದ್ದು, ಉಡುಪಿಯಲ್ಲಿ ಯಷ್ಪಾಲ್ ಮತ್ತು ದ.ಕ.ಜಿಲ್ಲೆಯಲ್ಲಿ ಶರಣ್ ರನ್ನು ಮುಸ್ಲಿಮರ ವಿರುದ್ಧ ಛೂ‌ ಬಿಡುತ್ತಿದ್ದಾರೆ.

ಮತೀಯ ಅಲ್ಪ ಸಂಖ್ಯಾತರ ವಿರುದ್ಧ ಕೋಮು ಗಲಭೆಗಳನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿರುವ ವೈದಿಕ ವರ್ಗ, ಹಿಂದುಳಿದ ವರ್ಗದ ಕೋಲು ನಾಯಕರನ್ನು ಸ್ಥಳೀಯವಾಗಿ ಮುಸ್ಲಿಮರ ಮತ್ತು ಕ್ರೈಸ್ತರ ವಿರುದ್ಧ ಬಳಕೆ ಮಾಡಿ ಫಸಲು ಕೊಯ್ಯುವ ಷಡ್ಯಂತ್ರ ರೂಪಿಸಿದ್ದಾರೆ.

ಮತೀಯ ವಿದ್ವೇಷ ಭಾಷಣ ಮಾಡುವ ಇಂತಹ ಕೋಲು ನಾಯಕರ ವಿರುದ್ಧ ಪೊಲೀಸರು ಮತೀಯ ನಿಂದನೆ ಪ್ರಕರಣ ದಾಖಲಿಸಿ ಬಂಧಿಸಬೇಕಿದೆ ಎಂದು ಕೆ.ಅಶ್ರಫ್ (ಮಾಜಿ ಮೇಯರ್) ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.