janadhvani

Kannada Online News Paper

ಸೌದಿ: 12 ದಿನಗಳ ಹಿಂದೆ ಹೊಸ ವೀಸಾದಲ್ಲಿ ಆಗಮಿಸಿದ ಅನಿವಾಸಿ ಭಾರತೀಯ ನಿಧನ

ಮೂರು ದಿನಗಳಿಂದ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಕೊಠಡಿ ತೆರೆದು ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿದೆ

ರಿಯಾದ್: ಅನಿವಾಸಿ ಮಲಯಾಳಿಯೊಬ್ಬರು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದಾರೆ. ಕೋಝಿಕ್ಕೋಡ್‌ನ ತಚಂಪೋಯ್‌ನಲ್ಲಿರುವ ವಾಡಿಕಲ್ ಅಬ್ದುಲ್ ರಶೀದ್ (41) ದಮ್ಮಾಮ್‌ನಲ್ಲಿ ನಿಧನರಾಗಿದ್ದಾರೆ.

12 ದಿನಗಳ ಹಿಂದೆ ಮನೆ ಚಾಲಕನಾಗಿ ಹೊಸ ವೀಸಾದಲ್ಲಿ ದಮ್ಮಾಮ್‌ಗೆ ಆಗಮಿಸಿದ್ದರು. ಮೂರು ದಿನಗಳಿಗೂ ಹೆಚ್ಚು ಕಾಲ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅವರ ಪತ್ನಿ ಪ್ರಾಯೋಜಕರನ್ನು ಸಂಪರ್ಕಿಸಿದ ಬಳಿಕ, ಕೊಠಡಿ ತೆರೆದು ನೋಡಿದಾಗ ಮಲಗಿದಲ್ಲಿಯೇ ಮೃತಪಟ್ಟಿರುವುದಾಗಿ ಕಂಡು ಬಂದಿದೆ. ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ಅಂದಾಜಿಸಲಾಗಿದೆ.

ದಮ್ಮಾಮ್‌ನಲ್ಲಿ ಅಂತ್ಯಕ್ರಿಯೆಗೆ ಬೇಕಾದ ಪ್ರಕ್ರಿಯೆಗಳು ಕೆಎಂಸಿಸಿ ನೇತೃತ್ವದಲ್ಲಿ ನಡೆಯುತ್ತಿದೆ.