janadhvani

Kannada Online News Paper

ವಿದೇಶಿ ಉದ್ಯೋಗಿಗಳ ರೆಸಿಡೆನ್ಸಿ ಪೆರ್ಮಿಟ್ ಸಿಂಧುತ್ವವನ್ನು ಐದು ವರ್ಷಗಳಿಗೆ ಸೀಮಿತಗೊಳಿಸಲು ಚಿಂತನೆ

ಪ್ರಸ್ತಾವನೆ ಜಾರಿಯಾದರೆ ವಲಸಿಗರಿಗೆ ಭಾರಿ ಹಿನ್ನಡೆಯಾಗಲಿದೆ.

ಕುವೈತ್ ಸಿಟಿ: ಪ್ರಸ್ತುತ ರೆಸಿಡೆನ್ಸಿ ಕಾನೂನನ್ನು ಪರಿಷ್ಕರಿಸಲು ಕುವೈತ್ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮ ‘ಕುವೈತ್ ಟೈಮ್ಸ್’ ವರದಿ ಪ್ರಕಾರ, ಕ್ಯಾಬಿನೆಟ್ ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಪ್ರಸ್ತಾಪಗಳನ್ನು ಪರಿಗಣಿಸುವ ಸಾಧ್ಯತೆ ಇದೆ.

ವಿದೇಶಿ ಉದ್ಯೋಗಿಗಳ ರೆಸಿಡೆನ್ಸಿ ಪೆರ್ಮಿಟ್ ಸಿಂಧುತ್ವವನ್ನು ಐದು ವರ್ಷಗಳಿಗೆ ಸೀಮಿತಗೊಳಿಸುವುದು ಮುಖ್ಯ ಪ್ರಸ್ತಾಪವಾಗಿದೆ. ಕ್ಯಾಬಿನೆಟ್ ಅನುಮೋದನೆಯ ನಂತರ, ಕರಡು ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಷ್ಟ್ರೀಯ ಅಸೆಂಬ್ಲಿಯ ಮುಂದೆ ಇಡಲಾಗುತ್ತದೆ.

ಅಕ್ಟೋಬರ್ ಅಂತ್ಯದ ವೇಳೆಗೆ ಸಂಸತ್ತಿನಲ್ಲಿ ಕಾನೂನನ್ನು ಪರಿಚಯಿಸಲಾಗುತ್ತದೆ ಎಂದು “ಕುವೈತ್ ಟೈಮ್ಸ್” ವರದಿ ಮಾಡಿದೆ. ದೇಶದ ಸ್ಥಳೀಯ-ವಿದೇಶಿ ಅಸಮತೋಲನವನ್ನು ಪರಿಗಣಿಸಿಯಾಗಿದೆ ಹೊಸ ಕ್ರಮ.

ಏತನ್ಮಧ್ಯೆ, ವಿದೇಶಿ ಹೂಡಿಕೆದಾರರಿಗೆ 15 ವರ್ಷಗಳ ನಿವಾಸ ಪರವಾನಗಿಯನ್ನು ಅನುಮತಿಸಲಾಗುತ್ತದೆ. ಸ್ಥಳೀಯ ಮಹಿಳೆಯರಿಗೆ ವಿದೇಶಿ ಗಂಡಂದಿರಿಂದ ಜನಿಸಿದ ಮಕ್ಕಳಿಗೆ 10 ವರ್ಷಗಳ ನಿವಾಸ ಪರವಾನಗಿಯನ್ನು ನೀಡಲು ಕರಡು ಕಾನೂನು ಪ್ರಸ್ತಾಪಿಸಿದೆ.

ವಲಸಿಗ ಜನಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ದೇಶದ ಜನಸಂಖ್ಯಾ ಅಸಮತೋಲನವನ್ನು ನಿವಾರಿಸಲಾಗುವುದು. ಈ ಬಗ್ಗೆ ಯಾವುದೇ ಅಧಿಕೃತ ವಿವರಣೆಯನ್ನು ಬಿಡುಗಡೆ ಮಾಡಲಾಗಿಲ್ಲ.ಪ್ರಸ್ತಾವನೆ ಜಾರಿಯಾದರೆ ವಲಸಿಗರಿಗೆ ಭಾರಿ ಹಿನ್ನಡೆಯಾಗಲಿದೆ.

error: Content is protected !! Not allowed copy content from janadhvani.com