janadhvani

Kannada Online News Paper

ಕೆ.ಸಿ.ಎಫ್ ಬಹರೈನ್ ವತಿಯಿಂದ ನಡೆಯಲಿರುವ ಬೃಹತ್ ಸ್ವಾತಂತ್ರ್ಯ ಸಮ್ಮಿಲನ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ

ಮನಾಮ : ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಸ್ವಾತಂತ್ಯ್ರ ಸಮ್ಮಿಲನ ಕಾರ್ಯಕ್ರಮವು ದಿನಾಂಕ 18-08-2023 ರಂದು ಕನ್ನಡ ಭವನದಲ್ಲಿ ಆಯೋಜಿಸಲು ತೀರ್ಮಾನಿಸಿದ್ದು, ಇದರ ಪ್ರಯುಕ್ತ ಸ್ವಾಗತ ಸಮಿತಿ ರೂಪೀಕರಣ ಸಭೆಯು ದಿನಾಂಕ 21-07-2023 ರಂದು ಕೆ.ಸಿ.ಎಫ್ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಸೆಂಟರ್ನಲ್ಲಿ ನಡೆಯಿತು. ಮುಹಮ್ಮದ್ ಸಖಾಫಿ ಉಸ್ತಾದರ ದುಆದೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿದರು. ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಆಗಮಿಸುವ ಬ್ರಹತ್ ಸ್ವಾತಂತ್ಯ್ರ ಸಮ್ಮಿಲನ ಕಾರ್ಯಕ್ರಮದ ಯಶಸ್ವಿಗಾಗಿ 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಚೇರ್ಮ್ಯಾನ್: ಲತೀಫ್ ಪೆರೋಲಿ
ವೈಸ್ ಚೇರ್ಮನ್: ಸುಹೈಲ್ ಬಿ ಸಿ ರೋಡ್
ಕನ್ವೀನರ್: ಜನಾಬ್ ಮಜೀದ್ ಮಾದಾಪುರ
ಫೈನಾನ್ಸ್ ಕಾರ್ಯದರ್ಶಿ: ಮುಹಾಝ್ ಉಜಿರೆ & ಶಾನಿಬ್ ಉಳ್ಳಾಲ್

ಅತಿಥಿಗಳ ವಸತಿ ಸಂಯೋಜಕರು: ಫಝಲ್ ಸುರತ್ಕಲ್ & ಜಮಾಲುದ್ದೀನ್ ವಿಟ್ಟಲ್
ಮೀಡಿಯಾ ಮತ್ತು ಕೆಸಿಎಫ್ ಡಾಕ್ಯುಮೆಂಟರಿ ರಚನೆ: ಸವಾದ್ ಉಲ್ಲಾಳ್, ಸೂಫಿ ಪೈಮ್ಬಚ್ಚಾಲ್ & ತೌಫೀಕ್ ಬೆಳ್ತಂಗಡಿ
ವೇದಿಕೆ ಮತ್ತು ಅತಿಥಿ ಸ್ವೀಕಾರ: ಮನ್ಸೂರ್ ಬೆಲ್ಮಾ & ಅಶ್ರಫ್ ರೆಂಜಾಡಿ
ವೇದಿಕೆ ಅಲಂಕಾರ: ಮಜೀದ್ ಪೈಮ್ಬಚ್ಚಾಲ್, ಮೂಸ ಪೈಮ್ಬಚ್ಚಾಲ್, ಅಝೀಝ್ ಪುರುಸಂಗೋಡಿ & ಶಾಫಿ ಮಾದಾಪುರ
ಮಾಧ್ಯಮ ಮತ್ತು ಪ್ರಚಾರ: ಖಲಂದರ್ ಶರೀಫ್ ಕಕ್ಕೆಪದವು
ಸ್ವಯಂಸೇವಕ ಉಸ್ತುವಾರಿ: ಸಮದ್ ಉಜಿರೆಬೆಟ್ಟು, ಆಸಿಫ್ ಮರಿಕ್ಕಳ, ಸಿದ್ದೀಕ್ ಎಣ್ಮೂರು, ಅಝೀಂ ಕಾಪು, ರಶೀದ್ ಈಶ್ವರಮಂಗಲ
ಸಾರಿಗೆ ಸೌಲಭ್ಯಗಳ ಉಸ್ತುವಾರಿ: ಹಾರಿಸ್ ಓಕ್ಕೆತ್ತೂರು, ರಝಾಕ್ ಆನೆಕಲ್, ಇಬ್ರಾಹಿಂ ಬೆಲ್ಮಾ
ಫನ್ಡ್ ರೈಸಿಂಗ್ ಮತ್ತು ವಿಐಪಿ ಮೀಟ್ ಟೀಮ್: ಜಮಾಲುದ್ದೀನ್ ವಿಟ್ಲ, ಅನ್ಸಾರ್ ಬಜ್ಪೆ, ಅಶ್ರಫ್ ಕೀನ್ಯಾ, ಹಾರಿಸ್ ಸಂಪ್ಯ, ಸೂಫಿ ಪೈಮ್ಬಚ್ಚಾಲ್, ಶಾನಿಬ್ ಉಳ್ಳಾಲ್, ಕರೀಂ ಉಚ್ಚಿಲ
ಸಾರ್ವಜನಿಕ ಆಹ್ವಾನ: ಶಿಹಾಬ್ ಪರಪ್ಪ, ಮನ್ಸೂರ್ ಬೆಲ್ಮಾ, ರಿಯಾಜ್ ಪೆರ್ಲ, ಆಶ್ರಫ್ ರೆಂಜಾಡಿ
ಜಾಹಿರಾತು ಸಂಗ್ರಹ ಉಸ್ತುವಾರಿ: ಅನ್ಸಾರ್ ಬಜ್ಪೆ, ಶಾನಿಬ್ ಉಳ್ಳಾಲ್, ಇಕ್ಬಾಲ್ ಮಂಜನಾಡಿ, ಶಾಫಿ ಕಂಬಳಬೆಟ್ಟು
ಧ್ವನಿವರ್ದಕ ವ್ಯವಸ್ಥೆಯ ಸಂಯೋಜಕರು: ಅಝೀಮ್ ಕಾಪು, ರಶೀದ್ ಈಶ್ವರಮಂಗಲ & ರಶೀದ್ ಅಡ್ಯಾರ್
ಆಹಾರ ಉಸ್ತುವಾರಿ: ಆಶ್ರಫ್ ಕೀನ್ಯಾ, ಹನೀಫ್ ಉಸ್ತಾದ್, ಬಷೀರ್ ಸಅದಿ ನಾಳ, ಸಿದ್ದೀಕ್ ಉಸ್ತಾದ್, ಅಹಮ್ಮದ್ ಉಸ್ತಾದ್ ಗಟ್ಟಮನೆ ಮುಹಮ್ಮದ್ ಸಖಾಫಿ, ಟಿ ಎಂ ಉಸ್ತಾದ್ ಮತ್ತು ಅಬೂಬಕ್ಕರ್ ಮದನಿ ಉಸ್ತಾದ್

ಕೊನೆಯಲ್ಲಿ ಸ್ವಾಗತ ಸಮಿತಿ ಚೇರ್ಮ್ಯಾನ್ ಲತೀಫ್ ಧನ್ಯವಾದಗೈದು 3 ಸ್ವಲಾತನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

error: Content is protected !! Not allowed copy content from janadhvani.com