ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಉಡುಪಿ ಜಿಲ್ಲಾ ಮಟ್ಟದ ಕ್ಯಾಬ್ ಝೋನ್ ಕ್ಯಾಂಪ್ ಕಾಪು ಜೆ ಸಿ ಭವನದಲ್ಲಿ ಬಹಳ ಯಶಸ್ವಿಯೊಂದಿಗೆ ಸಮಾಪ್ತಿಗೊಂಡಿತು.
ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರುಗಳು, ಕಾಪು, ಉಡುಪಿ, ಕುಂದಾಪುರ, ನಾವುಂದ, ಪಡುಬಿದ್ರಿ ಹಾಗೂ ಕಾರ್ಕಳ ಈ ಆರು ಝೋನ್ ಸಮಿತಿಗಳ ಪದಾಧಿಕಾರಿಗಳು, ಯೂನಿಟ್ ಸಮಿತಿಗಳ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಸೇರಿದಂತೆ ಪ್ರಮುಖ ನಾಯಕರುಗಳ ಕ್ಯಾಬ್ ಝೋನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾಧ್ಯಕ್ಷ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ವಹಿಸಿದ್ದರು
ಕಾಪು ಖಾಝಿ ಅಹ್ಮದ್ ಖಾಸಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ಎಮ್ ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ನಾಯಕರುಗಳ ಜವಾಬ್ದಾರಿ ಹಾಗೂ ಸಂಘಟನೆಯ ಕಾರ್ಯಾಚರಣೆ ಬಗ್ಗೆ ತರಗತಿಯನ್ನು ನಡೆಸಿಕೊಟ್ಟರು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಸುನ್ನೀ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು, ಎಸ್ ಎಮ್ ಎ ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ ,ಜಿಲ್ಲಾ ಕ್ಯಾಬಿನೆಟ್ ನಾಯಕರಾದ ಅಬ್ದುಲ್ ಲತೀಫ್ ಫಾಲಿಲಿ ನಾವುಂದ, ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು, ಸಲೀಂ ಪಕೀರ್ನಕಟ್ಟೆ, ಹುಸೈನ್ ಮೋನು ಪಡುಕರೆ, ಉಮರ್ ಪುತ್ತಿಗೆ,ಪಿ ಎಮ್ ಹಮೀದ್ ಪಡುಬಿದ್ರಿ ಹಾಗೂ ಸುಲೈಮಾನ್ ಸಅದಿ ಅಲ್ ಅಫ್ಲಳಿ, ಶಬೀರ್ ಸಖಾಫಿ ಉಚ್ಚಿಲ,ಅಬ್ದುರ್ರಹ್ಮಾನ್ ಸಖಾಫಿ ಕೋಡಿ ಹಾಗೂ ಮತ್ತಿತರ ನೂರರಷ್ಟು ಎಸ್ ವೈ ಎಸ್ ನಾಯಕರು ಪ್ರತಿನಿಧಿಗಳಾಗಿ ಭಾಗವಹಿಸಿದರು.
ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಎಮ್ ಇಲ್ಯಾಸ್ ನಾವುಂದ ಸ್ವಾಗತಿಸಿದರು ಕೋಶಾಧಿಕಾರಿ ಪಿ ಪಿ ಬಶೀರ್ ಮುಸ್ಲಿಯಾರ್ ಮಜೂರು ವಂದಿಸಿದರು