janadhvani

Kannada Online News Paper

“ನೆಕ್ಕಿಲಾಡಿ ಇಸ್ಮಾಯಿಲ್ ಮದನಿ ವಫಾತ್ ” ಸಹಿಸಲಾಗದ ನೋವು- ಮದನೀಸ್

ಮುಸ್ಲಿಂ ಸಮುದಾಯದ ಜನ ಮನಸ್ಸುಗಳಲ್ಲಿ ಅದರಲ್ಲೂ ಮುಖ್ಯವಾಗಿ ಬ್ಯಾರಿ ಸಮುದಾಯದಲ್ಲಿ ಜನಾನುರಾಗಿಯಾಗಿದ್ದು ಎಲ್ಲರ ಆವೇಶವಾಗಿದ್ದ ಮರ್ಹೂಂ ನೆಕ್ಕಿಲಾಡಿ ಇಸ್ಮಾಯಿಲ್ ಮದನಿ ಉಸ್ತಾದರ ವಿಯೋಗವು ಮುಸ್ಲಿಂ ಸಮುದಾಯಕ್ಕುಂಟಾದ ಬಲು ದೊಡ್ಡ ನಷ್ಟವಾಗಿದೆ ಎಂದು ಮದನೀಸ್ ಕೇಂದ್ರ ಸಮಿತಿ ಅಭಿಪ್ರಾಯಪಟ್ಟಿದೆ.

ಸದಾ ಲವಲವಿಕೆಯಿಂದಿದ್ದು ಯುವಕರನ್ನೂ ನಾಚಿಸುವ ರೀತಿಯಲ್ಲಿ ಕ್ರಿಯಾಶೀಲರಾಗಿ, ಹಾಸ್ಯ ಮಿಶ್ರಿತ ಭಾಷಣ, ಮಾತುಗಾರಿಕೆಗೆ ಹೆಸರು ವಾಸಿಯಾಗಿದ್ದ ಮಹಾನರು ಸುನ್ನೀ ವಿಧ್ಯಾಭ್ಯಾಸ ರಂಗದಲ್ಲಿ ನಡೆಸಿದ ಕ್ರಾಂತಿ ಅಭೂತಪೂರ್ವ. ಶ್ರೀಯುತರಿಗೆ ಅಲ್ಲಾಹನು ಮಗ್ಫಿರತ್ ಹಾಗೂ ಮರ್ಹಮ್ಹತ್ ಕರುಣಿಸಲೆಂದು ಪ್ರಾರ್ಥಿಸುವುದರೊಂದಿಗೆ ಅವರ ಹೆಸರಿನಲ್ಲಿ ಮಯ್ಯಿತ್ ನಮಾಝ್ ಮತ್ತು ದುಆ, ತಹ್ಲೀಲ್ ಸಮರ್ಪಣೆಯನ್ನು ನಾಡಿನಾದ್ಯಂತವಿರುವ ಎಲ್ಲಾ ಮುಸ್ಲಿಂ ಸಮುದಾಯ ಬಾಂಧವರು ನಡೆಸಬೇಕೆಂದು ಕೇಂದ್ರ ಮದನೀಸ್ ತಿಳಿಸಿದೆ.

ಮದನೀಸ್ ಕೇಂದ್ರ ಸಮೀತಿ ಅಧ್ಯಕ್ಷ ಖಾಝಿ ಇಬ್ರಾಹಿಂ ಮದನಿ ಕ್ರಷ್ಣಾಪುರ, ಮಾಜಿ ಅಧ್ಯಕ್ಷ ಕಾಜೂರ್ ಜಮಲುಲ್ಲೈಲಿ ತಂಙಳ್,ಕಾರ್ಯದರ್ಶಿ ಜಪ್ಪು ಅಬ್ದುಲ್ ರಹ್ಮಾನ್ ಮದನಿ, ಕೋಶಾಧಿಕಾರಿ ಅಕ್ಕರಂಗಡಿ ಅಬ್ದುಲ್ ರಝಾಕ್ ಮದನಿ, ಕಾರ್ಯದರ್ಶಿಗಳಾದ ಬಶೀರ್ ಮದನಿ ಕೂಳೂರು,ಬಂಡಾಡಿ ಅಬ್ಬಾಸ್ ಮದನಿ,ಸಂಚಾಲಕ ಆರ್ ಕೆ ಮದನಿ ಅಮ್ಮೆಂಬಳ ಮೊದಲಾದವರು ನೆಕ್ಕಿಲಾಡಿ ಮದನಿ ಉಸ್ತಾದರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !! Not allowed copy content from janadhvani.com