janadhvani

Kannada Online News Paper

ಭವಿಷ್ಯದ ರಾಜ್ಯ ಮುಖ್ಯಮಂತ್ರಿ -ಶಾಫಿ ಸಅದಿ ಸ್ಪಷ್ಟನೆ

ಭವಿಷ್ಯದ ಮುಖ್ಯಮಂತ್ರಿ ಯ ಬಗ್ಗೆ ನನ್ನ ಹೆಸರಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ.ನನ್ನ ಪತ್ರಿಕಾ ಸಂದರ್ಶನದಲ್ಲಿ ಅಂತಹುದೊಂದು ಪ್ರಸ್ತಾಪವೇ ವ್ಯಕ್ತವಾಗಿಲ್ಲ. ಜಾತ್ಯತೀತ ಮನೋಭಾವ ದಲ್ಲಿ ದೃಢವಾದ ವಿಶ್ವಾಸ ಇಟ್ಟ ವ್ಯಕ್ತಿ ಮುಂದಿನ ಮುಖ್ಯಮಂತ್ರಿ ಯಾಗಬೇಕೆಂಬ ಅಭಿಲಾಷೆಯೇ ನಮ್ಮದು.

ಸಂದರ್ಶನ ಮುಗಿದ ನಂತರ ಆ ಪತ್ರಕರ್ತ ಹೀಗೆ ಕುಶಲೋಪರಿ ನಡೆಸುತ್ತಾ ಮಾತಿನ ಮಧ್ಯೆ ಸಿದ್ದ ರಾಮಯ್ಯರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವೇನಾದರೂ ಯಶಸ್ವಿಯಾದಲ್ಲಿ ಕೋಮುವಾದಿಗಳ ಸರ್ಕಾರ ಅಸ್ತಿತ್ವಕ್ಕೆ ಬರುವ ಅಪಾಯ ಇದಯೇ ಎಂದು ಕೇಳಿದರು (ಇದು ಸಂದರ್ಶನದ ಭಾಗವಲ್ಲ ಎಂಬುದನ್ನು ಗಮನಿಸಬೇಕು)
ಆಗ ನಾನುತ್ತರಿಸಿದ್ದಿಷ್ಟೇ; “ಅಂತಹ ಸಾದ್ಯತೆ ಕಡಿಮೆ, ಹಾಗೇನಾದರೂ ಸಂಭವಿಸಿದರೆ ಕುಮಾರಸ್ವಾಮಿ ಹಾಗು ಪರಮೇಶ್ವರ್ ,ಡಿ ಕೆ ಶಿ ಅಥವಾ ಕಾಗೋಡು ತಿಮ್ಮಪ್ಪ ನವರ ನೇತ್ರತ್ವದಲ್ಲಿ ಜಾತ್ಯತೀತ ಸರ್ಕಾರವೇ ಬರಬಹುದು” ಇದು ನನ್ನ ಅಭಿಲಾಷೆಯಲ್ಲ. ನಮ್ಮ ಬಯಕೆಯೂ ಅಲ್ಲ. ನಮ್ಮ ಗುರಿಯೂ ಅಲ್ಲ. ನಮ್ಮ ರಾಜಕೀಯ ನಿಲುವೂ ಅಲ್ಲ. ಏನೇ ಆದರೂ ಕೋಮುವಾದಿ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಕಡಿಮೆಯೆಂದೂ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುವುದಾದರೆ ಅದರ ರೂಪು ರೇಷೆ ಹೀಗಿರಬಹುದೆಂದು ಅಂದಾಜಿಸಿ ಅಭಿಪ್ರಾಯಿಸಿದ್ದೆ.ಆದರೆ ನನ್ನ ಹೇಳಿಕೆ ಸ್ವಲ್ಪ ತಿರುಚಲ್ಪಟ್ಟು ರಾಜಕೀಯ ಹೇಳಿಕೆಯ ತರ ಪ್ರಕಟವಾಗಿದೆ.

ಆ ಅಭಿಪ್ರಾಯ ಆ ಸಂದರ್ಶನದ ಭಾಗವೇ ಆಗಿರಲಿಲ್ಲ ಮತ್ತು ನಮ್ಮ ರಾಜಕೀಯ ನಿಲುವು-ಗುರಿ ಹೇಳಿದ್ದೂ ಅಲ್ಲ. ಪತ್ರಕರ್ತರು ತಯಾರಿಸಿದ ತಲೆಬರಹಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.ಬರೀ ಹೆಡ್ ಲೈನ್ ನೋಡಿ ಹಲವರು ಹಲವು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಒಂದು ಸಂದರ್ಶನ ವನ್ನು ಮುಂದಿಟ್ಟು ಕೆಲವರು ಎಸ್ಸೆಸ್ಸೆಫ್ ಹಾಗು ಸುನ್ನೀ ಕಾರ್ಯಕರ್ತರೆಡೆಯಲ್ಲಿ ಗೊಂದಲ ಸೃಷ್ಟಿಸುವ ಹತಾಶ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನವು ಸಫಲವಾಗದು.

ನಮ್ಮ ರಾಜಕೀಯ ನಿಲುವನ್ನು ಈಗಾಗಲೇ ಸುಲ್ತಾನುಲ್‌ ಉಲಮಾ ಎಪಿ ಉಸ್ತಾದ್ ಪ್ರಕಟಿಸಿದ್ದಾರೆ. ಕೆಲವು ರಾಜಕೀಯ ಪಕ್ಷದ ನಾಯಕರು ಸುನ್ನೀ ಕಾರ್ಯಕರ್ತರೆಡೆಯಲ್ಲಿ ಗೊಂದಲ ಸೃಷ್ಟಿಸುತ್ತಾ ಶಾಫಿ ಸ‌ಅದಿ ಒಂದು ರಾಜಕೀಯ ಪಕ್ಷದ ಪರ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸುವ ಹತಾಶ ಪ್ರಯತ್ನ ನಡೆಸಿದ್ದಾರೆ.ಕಾಂಗ್ರೆಸ್, ಜೆ ಡಿ ಎಸ್ ಹಾಗೂ ಬಿಜೆಪಿ ಸಹಿತವಿರುವ ಎಲ್ಲಾ ರಾಜಕೀಯ ಪಕ್ಷಗಳಿಂದ ಸಮಾನಾದ ಅಂತರ ಕಾಯ್ದುಕೊಂಡು ಮುಂದಿನ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಸಮುದಾಯದ ಅಭಿವೃದ್ಧಿಗೆ ಒತ್ತು ಕೊಡುವ ಅಭ್ಯರ್ಥಿಗಳನ್ನು ಚುನಾಯಿಸಬೇಕಾಗಿ ಈ ಮೂಲಕ ವಿನಂತಿಸುದ್ದೇನೆ.

ಎನ್.ಕೆ.ಎಂ.ಶಾಫಿ ಸ‌ಅದಿ ಬೆಂಗಳೂರು

error: Content is protected !! Not allowed copy content from janadhvani.com