janadhvani

Kannada Online News Paper

ಮೇ.11ಕ್ಕೆ ದುಬೈನಲ್ಲಿ ಅಲ್ ಖಾದಿಸ ವತಿಯಿಂದ ‘ಹುದ್ನಾ -1439’

ದುಬೈ:ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ದುಬೈ ಸಮಿತಿ ವತಿಯಿಂದ ಹುದ್ನಾ -1439 ಕಾರ್ಯಕ್ರಮವು  ನಾಳೆ ದುಬೈಯಲ್ಲಿ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕಾವಳ್ಕಟ್ಟೆ ಎoಬಲ್ಲಿ ಬಡವರಿಗೆ ನಿರ್ಗತಿಕರಿಗೆ ಆಶಾ ಕೇಂದ್ರವಾಗಿ ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವ ಅಲ್ ಖಾದಿಸ ಎಜುಕೇಷನಲ್ ಅಕಾಡಮಿ ಇದರ ದುಬೈ ಸಮಿತಿ ವತಿಯಿಂದ ಹುದ್ನಾ 1439 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 11/5/2018 ಶುಕ್ರವಾರ ಮಗ್ರಿಬ್ ನಮಾಝ್ ನಂತರ ದೇರಾ ಅಲ್ ನಖೀಲ್ ನಲ್ಲಿರುವ ಗೋಲ್ಡನ್ ಸ್ಕ್ವೇರ್ ಹೋಟೆಲ್ ಸಭಾಂಗಣದಲ್ಲಿ ದುಬೈ ಸಮಿತಿ ಅಧ್ಯಕ್ಷರಾದ ಅಬ್ದುಲ್ ಬಶೀರ್ ಬೊಳುವಾರ್ ರವರ ಅಧ್ಯಕ್ಷತೆಯಲ್ಲಿನಡಯಲಿದೆ. ಅಪ್ಪಟ ಪ್ರವಾದಿ ಪ್ರೇಮಿ ,ತಾಳ್ಮೆ,ಸಹನೆ,ಸರಳತೆ,ಸಜ್ಜನಿಕೆಯ ಪ್ರತಿ ರೂಪ, ಉನ್ನತ ಸ್ವಭಾವದ ಮೂಲಕ ಜನರನ್ನು ತನ್ನಡೆಗೆ ಸೆಳೆದ, ಅಲ್ ಖಾದಿಸ ವಿದ್ಯಾಸಂಸ್ಥೆಯ ಸ್ಥಾಪಕ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಯವರು ದುವಾಶೀರ್ವಚಗೈಯ್ಯಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಮಾಲ್ ನಾಸರ್ ಲಂಡನ್ ನೆರವೇರಿಸಲಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್(ಕೆಎಂಜೆಸಿ)ಇದರ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಅಬೂಸುಫ್ಯಾನ್ ಇಬ್ರಾಹಿಮ್ ಮದನಿ ಮತ್ತು ಎಸ್ ವೈ ಎಸ್ ಬಂಟ್ವಾಳ ಝೋನ್ ಅಧ್ಯಕ್ಷರಾದ ಬಹುಮಾನ್ಯ ಹಂಝ ಮದನಿ ಮಿತ್ತೂರ್ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.

ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ, ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಅಲ್ ಖಾದಿಸ ದುಬೈ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com