janadhvani

Kannada Online News Paper

ಸೌದಿಯಲ್ಲಿ ಚರ್ಚ್ ನಿರ್ಮಾಣ-ವಾಸ್ತವಾಂಶವೇನು?

ವ್ಯಾಟಿಕನ್ ಸಿಟಿ: ಸೌದಿ ಅರೇಬಿಯಾದಲ್ಲಿ ಚರ್ಚ್ನಿರ್ಮಿಸಲು  ವ್ಯಾಟಿಕನ್ ಮತ್ತು ಸೌದಿ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನುವ ವಾರ್ತೆಯು ಪ್ರಸಾರವಾಗುತ್ತಿದೆ.ಈಜಿಪ್ಟಿನ ಸುದ್ದಿ ಸಂಸ್ಥೆಯೊಂದು ಪ್ರಸಾರ ಪಡಿಸಿದ ವರದಿಯನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿ ಮಾಡಿದ್ದವು.

ಆದರೆ ಈ ಸುದ್ದಿಯನ್ನು ನಿರಾಕರಿಸಿ ವ್ಯಾಟಿಕನ್‌ ರಂಗಪ್ರವೇಶಗೈದಿದೆ.ಸೌದಿ ಅರೇಬಿಯಾದಲ್ಲಿ ಚರ್ಚ್ ನಿರ್ಮಿಸಲಾಗುವುದು ಎನ್ನುವ ಸುದ್ದಿಯು ವಾಸ್ತವ ವಿರುದ್ದವೆಂದು ವ್ಯಾಟಿಕನ್ ಪ್ರತಿನಿಧಿಯನ್ನು ಉಲ್ಲೇಖಿಸಿ ಡೈಲಿ ಮೈಲ್ ವರದಿ ಮಾಡಿದೆ.

ಆದರೆ, ಮುಸ್ಲಿಂ ವರ್ಲ್ಡ್ ಲೀಗ್ ಮಹಾಕಾರ್ಯದರ್ಶಿ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್ ಈಸ ಮತ್ತು ವ್ಯಾಟಿಕನ್‌ ನ ಅಂತರಧರ್ಮೀಯ ಸಂಭಾಷಣೆ ಗಾಗಿ ನಿಯುಕ್ತರಾದ ಸಂಸ್ಥೆಯ ಅಧ್ಯಕ್ಷ ಜೀನ್-ಲೂಯಿಸ್ ಟಾರ್ರೆಸ್ ಸೇರಿ ಈ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ವರದಿಯಾಗಿದ್ದವು.ಹಿಂಸೆ ಮತ್ತು ಭಯೋತ್ಪಾದನೆಯನ್ನು ಜಗತ್ತಿನಿಂದ ಕಿತ್ತೊಗೆದು ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ವಿವಿಧ ಧರ್ಮಗಳ ಮತ್ತು ಸಂಸ್ಕೃತಿಗಳ ಪಾತ್ರವನ್ನು ತೋರ್ಪಡಿಸಲು ಈ ಒಪ್ಪಂದ ಮಾಡಲಾಗಿದೆ ಎಂದು ಪ್ರಚಾರಪಡಿಸಲಾಗಿತ್ತು.

ಇತರ ಗಲ್ಫ್ ದೇಶಗಳಲ್ಲಿ ಚರ್ಚುಗಳಿವೆ ಆದರೆ ಸೌದಿ ಅರೇಬಿಯಾದಲ್ಲಿ ಕ್ರಿಶ್ಚಿಯನ್ ಚರ್ಚುಗಳು ಇಲ್ಲ. ಕಳೆದ ವರ್ಷ ವ್ಯಾಟಿಕನ್ ಪ್ರತಿನಿಧಿಯಾಗಿ ಜೀನ್-ಲೂಯಿಸ್ ಟಾರ್ರೆಸ್ ಸೌದಿಗೆ ಬೇಟಿ ನೀಡಿದ್ದರು.

error: Content is protected !! Not allowed copy content from janadhvani.com