janadhvani

Kannada Online News Paper

ಗೋಹತ್ಯೆ ರದ್ದತಿ, ರಾಜ್ಯದ ಕೃಷಿಕರ ಸಮಸ್ಯೆಯಾಗಿದೆ: ಮುಸ್ಲಿಮರನ್ನು ಎಳೆದು ತರಬೇಡಿ- ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ

ಮಂಗಳೂರು: ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ, ಈ ಹಿಂದಿನ ಸರಕಾರ ಗೋಹತ್ಯೆ ನಿಷೇದ ಕಾಯ್ದೆಗೆ ತಿದ್ದುಪಡಿ ತಂದು ಜನರ ಸಂಸ್ಕೃತಿ ಮತ್ತು ಭಾವನೆಗಳ ಗೌರವ ಸಂರಕ್ಷಿಸುತ್ತೇವೆ ಎಂದು ಹೈನು ಮತ್ತು ಜಾನುವಾರು ಚಟುವಟಿಕೆಗಳಿಗೆ ಕಡಿವಾಣ ಹಾಕಿತ್ತು.

ಪ್ರಸ್ತುತ ರಾಜ್ಯದಲ್ಲಿ ನಿರುಪಯುಕ್ತ ಹಸುಗಳನ್ನು ವಿಲೇವಾರಿ ಮಾಡುವ ವಿಷಯದಲ್ಲಿ ಪಶು ಸಂಗೋಪನೆ ಸಚಿವರು ಹೇಳಿಕೆ ನೀಡಿ, ಕೃಷಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಚರ್ಚಿಸಿ ಹಾಲಿ ಇದ್ದ ಕಾನೂನಲ್ಲಿ ಬದಲಾವಣೆ ತರುತ್ತೇವೆ ಎಂದು ಮಾದ್ಯಮದಲ್ಲಿ ಹೇಳಿಕೆ ನೀಡಿದ ನಂತರ ರಾಜ್ಯದಲ್ಲಿ ಬಿಜೆಪಿ ಸದ್ರಿ ಬೆಳವಣಿಗೆಯನ್ನು ಮತೀಯ ವಿಷಯವಾಗಿ ಪರಿವರ್ತಿಸಲು ಪ್ರಯತ್ನ ಪಡುತ್ತಿದೆ.

ಸಚಿವರ ಹೇಳಿಕೆ ಒಂದು ನಿರ್ಧಿಷ್ಟ ಸಮುದಾಯವನ್ನು ಓಲೈಕೆ ಗೊಳಿಸಲು ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಅಥವಾ ರದ್ದತಿಯ ವಿಷಯವು ಈ ರಾಜ್ಯದ ಕೃಷಿಕರ,ಹೈನು ಉದ್ಯಮೆದಾರರ ಮತ್ತು ರೈತರ ಪ್ರಮುಖ ಸಮಸ್ಯೆಯಾಗಿದೆ,ಹೊರತು ಯಾವುದೇ ನಿರ್ಧಿಷ್ಟ ಸಮುದಾಯದ ಸಮಸ್ಯೆ ಅಲ್ಲ ಎಂದು ಬಿಜೆಪಿ ತಿಳಿಯಲಿ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಪಡಿಸಿ ‘ ಕಟುಕರು ‘ ಎಂದು ಸಂಬೋಧಿಸಿ ಬಿಜೆಪಿ ನಾಯಕರು ಮತೀಯತೆ ಕೆರಳಿಸುವ ಹೇಳಿಕೆ ನೀಡುವುದನ್ನು ರಾಜ್ಯದ ಜನತೆ ಚೆನ್ನಾಗಿ ಅರಿಯುತಿದ್ದಾರೆ ಎಂಬುದನ್ನು ತಿಳಿಯಬೇಕು.

ಗೋಹತ್ಯೆ ನಿಷೇಧ ಅಥವಾ ರದ್ದತಿ ಹೆಸರಲ್ಲಿ ರಾಜ್ಯದ ಮುಸ್ಲಿಮರನ್ನು ಎಳೆದು ತಂದು ಮತೀಯ ಫಸಲು ತೆಗೆಯುವ ಪ್ರಯತ್ನಕ್ಕೆ,ಈಗಾಗಲೇ ರಾಜ್ಯದ ಜನತೆ ಪ್ರಬುದ್ಧ ಸ್ಥಿತಿಯಲ್ಲಿಯೇ ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಮತೀಯ ಭಾವನೆ ಕೆರಳಿಸಿದ ಪಕ್ಷಗಳ ಸ್ಥಿತಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಏನಾಗಿದೆಯೋ ಅದೇ ಸ್ಥಿತಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಖಂಡಿತವಾಗಿ ಆಗಲಿದೆ ಎನ್ನುವುದನ್ನು ಸಮರ್ಪಕವಾಗಿ ಅರಿಯಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಕೀತು ನೀಡಿದ್ದಾರೆ.

error: Content is protected !! Not allowed copy content from janadhvani.com