janadhvani

Kannada Online News Paper

ಮಕ್ಕಳ ಮೇಲಿನ ವಿಮಾನ ಟಿಕೆಟ್ ರಿಯಾಯಿತಿಯನ್ನು ಹಿಂಪಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್?

ಬಜೆಟ್ ಏರ್‌ಲೈನ್ಸ್‌ಗಳಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾತ್ರ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ನೀಡುತ್ತಿತ್ತು

ದುಬೈ: ಮಕ್ಕಳ ವಿಮಾನ ಟಿಕೆಟ್ ಮೇಲಿನ ರಿಯಾಯಿತಿಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಿಂಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಂಪನಿಯ ಹೊಸ ವೆಬ್‌ಸೈಟ್‌ನಲ್ಲಿ ಟಿಕೆಟ್ ದರಗಳನ್ನು ಪರಿಶೀಲಿಸಿದಾಗ,ಮಕ್ಕಳು ಮತ್ತು ವಯಸ್ಕರಿಗೆ ಒಂದೇ ದರವನ್ನು ತೋರಿಸುತ್ತಿದೆ. ಹಿಂದಿನ ದಿನಗಳಲ್ಲಿ ಟಿಕೆಟ್ ಕಾಯ್ದಿರಿಸಿದವರೂ ಅದೇ ದರವನ್ನು ಪಾವತಿಸಬೇಕಾಯಿತು ಎನ್ನುತ್ತಾರೆ ಅನುಭವಿಗಳು.

ಬಜೆಟ್ ಏರ್‌ಲೈನ್ಸ್‌ಗಳಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾತ್ರ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ನೀಡುತ್ತಿತ್ತು. ಕುಟುಂಬ ಸಮೇತ ವಿದೇಶದಲ್ಲಿ ನೆಲೆಸಿರುವ ವಲಸಿಗರಿಗೆ ಈ ದರ ರಿಯಾಯತಿಯು ದೊಡ್ಡ ಪರಿಹಾರವಾಗಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಕ್ಕಳ ವಿಮಾನ ದರಗಳು ಸಾಮಾನ್ಯವಾಗಿ ವಯಸ್ಕರಿಗಿಂತ ಸುಮಾರು 10% ಕಡಿಮೆಯಾಗಿತ್ತು.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಏಷ್ಯಾ ಇಂಡಿಯಾದ ಟಿಕೆಟ್ ಬುಕಿಂಗ್ ನ್ನು ಒಂದೇ ಪ್ಲಾಟ್‌ಫಾರ್ಮ್ಹನಲ್ಲಿ ಮಾಡುವ ಭಾಗವಾಗಿ ವೆಬ್‌ಸೈಟ್ ಅನ್ನು ಮಾರ್ಪಡಿಸಲಾಗಿದೆ. ಇದರ ನಂತರ, ಮಕ್ಕಳು ಮತ್ತು ವಯಸ್ಕರಿಗೆ ಒಂದೇ ಟಿಕೆಟ್ ದರವನ್ನು ವಿಧಿಸಲಾಗುತ್ತಿದೆ.

ಯುಎಇಯ ದುಬೈ ಮತ್ತು ಶಾರ್ಜಾ ವಿಮಾನ ನಿಲ್ದಾಣಗಳಿಂದ ಕೋಝಿಕ್ಕೋಡ್‌ಗೆ ಏರ್ ಇಂಡಿಯಾ ಸೇವೆಗಳನ್ನು ಕೆಲವು ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಇದರೊಂದಿಗೆ ಈ ವಲಯದಲ್ಲಿ ವಾರಕ್ಕೆ 2200 ಸೀಟುಗಳ ಕೊರತೆಯಿದೆ. ಇದಾದ ನಂತರ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಕ್ಕಳ ರಿಯಾಯಿತಿ ದರವನ್ನು ತೆಗೆದುಹಾಕಿದೆ.

error: Content is protected !! Not allowed copy content from janadhvani.com