janadhvani

Kannada Online News Paper

ರಾಜ್ಯದಲ್ಲಿ ಮುಸ್ಲಿಂ B2 ಮೀಸಲಾತಿ ರದ್ದು ವಿರೋಧ ರಜ್ವಿ

ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರವು ಮುಸ್ಲಿಂ ಸಮುದಾಯದವರಿಗೆ 4% ಮೀಸಲಾತಿ ರದ್ದು ಗೊಳಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಆಲ್ ಹಾಜ್ ಮೊಹಮ್ಮದ್ ಶಾಹಿದ್ ರಜ್ವಿ ರವರು ವಿರೋಧ ವ್ಯಕ್ತಪಡಿಸಿ ದ್ದಾರೆ.

ಈ ಸಂಬಂಧಿತ ಪ್ರತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷರು ಈಗಾಗಲೇ ಮುಸ್ಲಿಂ ಸಮುದಾಯದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಇದನ್ನು ಗಮನದಲ್ಲಿ ಇಡದೆ ಈ ನಿರ್ಧಾರಕ್ಕೆ ಬಂದಿರುವುದು ಮುಸ್ಲಿಮರ ಹಕ್ಕುಚ್ಯುತಿಯನ್ನೂ ಕಸಿದುಕೊಳ್ಳಲು ಮುಂದಾಗಿರುವುದು ಉತಮವಾದ ಬೆಳವಣಿಗೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಯವರ ಸಬ್ ಕಾ ಸಾತ್ ಸಬಕ ವಿಕಾಸ್ ಪ್ರಣಾಳಿಕೆಗೆ ಅರ್ಥವಿಲ್ಲದಂತಾಗಿದೆ ತಕ್ಷಣಕ್ಕೆ ಮುಸ್ಲಿಮರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರವನ್ನು ಕೈಬಿಡಬೇಕು ರದ್ದತಿಗೆ ಆದೇಶವನ್ನು ವಾಪಸ್ ಪಡೆಯುವ ಮೂಲಕ ಮುಸ್ಲಿಮರ ಭಾವನೆಗಳನ್ನು ಗೌರವಿಸಬೇಕಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಬೆಳಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಾನತೆಯನ್ನೂ ಕಾಪಾಡಬೇಕಾದ ಅನಿವಾರ್ಯತೆ ಸೃಷ್ಟಿಮಾಡಬೇಕಾಗಿ ತಿಳಿಸಿದರು.

error: Content is protected !! Not allowed copy content from janadhvani.com