ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ದಕ್ಷಿಣ ಕನ್ನಡ (ವೆಸ್ಟ್) ಜಿಲ್ಲಾ ಕೌನ್ಸಿಲ್ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಪಾಣೆಮಂಗಳೂರು ಎಸ್.ಎಸ್. ಆಡಿಟೋರಿಯಂನಲ್ಲಿ ನಡೆಯಿತು.
ಇಸ್ಹಾಕ್ ಝುಹ್ರಿ ಸೂರಿಂಜೆ ಸಭೆಯನ್ನು ಉದ್ಘಾಟಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಕೆ.ಪಿ.ಹುಸೈನ್ ಸಅದಿ ಕೆಸಿ ರೋಡ್ ಮುಖ್ಯ ಭಾಷಣ ಮಾಡಿದರು. ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ರವರ ನೇತೃತ್ವದಲ್ಲಿ ನವ ಸಾರಥಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಇಸ್‌ಹಾಖ್ ಝುಹ್ರಿ ದೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಅಬ್ದುರಹ್ಮಾನ್ ಪ್ರಿಂಟೆಕ್ ಕೃಷ್ಣಾಪುರ,ಕೋಶಾಧಿಕಾರಿಯಾಗಿ ನಝೀರ್ ಮುಡಿಪು ಹಾಗೂ ಉಪಾಧ್ಯಕ್ಷರಾಗಿ ಬಶೀರ್ ಮದನಿ ಕಾಮಿಲ್ ಸಖಾಫಿ ಕೂಳೂರು, ಕಾರ್ಯದರ್ಶಿಗಳಾಗಿ ಬದ್ರುದ್ದೀನ್ ಅಝ್‌ಹರಿ ಕೈಕಂಬ (ದಅ್‌ವಾ), ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ (ಸಂಘಟನೆ), ಖಾಲಿದ್ ಹಾಜಿ ಭಟ್ಕಳ (ಸಾಂತ್ವನ), ಉಮರುಲ್ ಫಾರೂಖ್ ಶೇಡಿಗುರಿ (ಇಸಾಬಾ), ಅಬ್ದುರ್ರಝಾಖ್ ಭಾರತ್, ಮಂಚಿ (ಸೋಷಿಯಲ್) ಬಶೀರ್ ಸಖಾಫಿ ಉಳ್ಳಾಲ (ಕಲ್ಚರಲ್).
ಕಾರ್ಯಕಾರಿ ಸದಸ್ಯರಾಗಿ ಯಾಕೂಬ್ ಸಅದಿ ನಾವೂರು, ಹಸನ್ ಪಾಂಡೇಶ್ವರ, ಅಬ್ದುಲ್ ಜಬ್ಬಾರ್ ಕಣ್ಣೂರು, ಮುಹಮ್ಮದ್ ಆಸಿಫ್ ಹಾಜಿ ಕೃಷ್ಣಾಪುರ, ತೌಸೀಫ್ ಸಅದಿ ಹರೇಕಳ, ಮುಹಮ್ಮದ್ ಇಸ್‌ಹಾಖ್ ಉಳ್ಳಾಲ, ಅಬೂಬಕರ್ ಸಿದ್ದೀಖ್ ತಲಪಾಡಿ, ಮಹ್ಮೂದ್ ಸಅದಿ ಕುಕ್ಕಾಜೆ, ಕೆ.ಪಿ.ಅಬ್ದುಲ್ಲಾ ಕೊಳಕೆ, ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ, ಮುತ್ತಲಿಬ್ ಮೂಡಬಿದ್ರೆ, ಖಾಸಿಂ ಲತೀಫಿ, ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಅವರನ್ನು ಆರಿಸಲಾಯಿತು.
ಇಬ್ರಾಹೀಂ ಖಲೀಲ್ ಮಾಲಿಕಿ ಸ್ವಾಗತಿಸಿ, ಅಬ್ದುರಹ್ಮಾನ್ ಪ್ರಿಂಟೆಕ್ ಧನ್ಯವಾದವಿತ್ತರು.