janadhvani

Kannada Online News Paper

ನಾಳೆ ಖಮರಿಯಾ – ಮುಜವ್ವಿದಾ ಕೋರ್ಸ್‌ಗಳ ಪದವಿ ಪ್ರದಾನ ಸಮಾರಂಭ

ವಿಮೆನ್ಸ್ ಇಸ್ಲಾಮಿಕ್ ಕೌನ್ಸಿಲ್ (ರಿ) ಇದರ ಅಧೀನದಲ್ಲಿ ನಡೆದು ಬರುತ್ತಿರುವ ಒಂದು ವರ್ಷದ ಖಮರಿಯಾ ಆನ್ಲೈನ್ ಶರೀಅತ್ ಕೋರ್ಸ್ ಮುಗಿಸಿದ ಎಪ್ಪತ್ತೈದು ಮಹಿಳೆಯರಿಗೆ ಅಲ್ ಖಮರಿಯಾ ಹಾಗೂ ಖುರ್ಆನ್ ಪಾರಾಯಣ ತರಬೇತುದಾರ ಕೋರ್ಸ್ ಮುಗಿಸಿದ ಮೂವತ್ತೆರಡು ಮಹಿಳೆಯರಿಗೆ ಅಲ್ ಮುಜವ್ವಿದಾ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮವು ಮಾರ್ಚ್ ಒಂದು ಬುಧವಾರ ಬೆಳಗ್ಗೆ ಹತ್ತು ಗಂಟೆಗೆ ಬಿಸಿ ರೋಡ್ ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಲಿದೆ.

ತಾಜುಲ್ ಉಲಮಾರ ಪೌತ್ರಿ ಸಯ್ಯಿದತ್ ಬುಶ್ರಾ ಬೀವಿ ಜಮಲುಲ್ಲೈಲಿ ಸರ್ಟಿಫಿಕೇಟ್ ವಿತರಣೆ ಮಾಡಲಿದ್ದಾರೆ.

ಖಮರಿಯಾ ವಿನೆನ್ಸ್ ಅಕಾಡೆಮಿ ಪ್ರಿನ್ಸಿಪಾಲ್ ಸ‌ಈದಾ ಫಾತಿಮಾ ಅಲ್ ಮಾಹಿರಾ ಮುಖ್ಯ ಭಾಷಣ ಮಾಡಲಿದ್ದು ಮಸ್‌ನವಿ ಶೀ ಕ್ಲಬ್ ಪ್ರಧಾನ ಕಾರ್ಯದರ್ಶಿ ರಾಹಿಲಾ ಶೇಖ್ ಅಲ್ ಖಮರಿಯಾ,ಅಲ್ ಮುಜವ್ವಿದಾ ಎಸೋಸಿಯೇಷನ್ ಅಧ್ಯಕ್ಷೆ ತಾಹಿರಾ ಸುಲ್ತಾನಿಯಾ ಮಾಣಿ ಸಂದೇಶ ಭಾಷಣ ಮಾಡಲಿದ್ದಾರೆ.

ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ‌.ಎಮ್ಮೆಸ್ಸೆಂ ಝೈನೀ ಕಾಮಿಲ್ ,ಕಾರ್ಯದರ್ಶಿ ಬಶೀರ್ ಅಹ್ಸನಿ ತೋಡಾರ್, ಅಲ್ ಮುಜವ್ವಿದಾ ಪ್ರಿನ್ಸಿಪಾಲ್ ಅಬ್ದುಲ್ ಜಲೀಲ್ ಇಂದಾದಿ ಸಂದೇಶ ನೀಡಲಿದ್ದಾರೆ.

ಡಾ. ಝೈನೀ ಕಾಮಿಲ್ ಅವರ ಸಾರಥ್ಯದಲ್ಲಿ ನಡೆಯುವ ಖಮರಿಯಾ ಶರೀಅತ್ ಕೊರ್ಸನ್ನು 2020 ಆಗಸ್ಟ್ ಹತ್ತರಂದು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಉಧ್ಘಾಟಿಸಿರುತ್ತಾರೆ.

ಇದರಲ್ಲಿ ಖುರ್ಆನ್,ಹದೀಸ್,ಕರ್ಮಶಾಸ್ತ್ರ,
ವಿಶ್ವಾಸ,ತಜ್ವೀದ್,ತಸವ್ವುಫ್ ಮುಂತಾದ ವಿಷಯಗಳಲ್ಲಿ ಮಹಿಳೆಯರಿಗೆ ಅಗತ್ಯವಾದ ಭಾಗಗಳನ್ನು ಆರಿಸಿ ವಿಶೇಷ ಪಠ್ಯಕ್ರಮ ತಯಾರಿಸಲಾಗಿದೆ.

ಇದರ ಜತೆ ತಜ್ಞರಿಂದ ವಿಶೇಷ ತರಬೇತಿ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಈಗಾಗಲೇ ಇದರ ನಾಲ್ಕು ಬ್ಯಾಚ್‌ಗಳು ಹೊರಬಂದಿದ್ದು ಐದನೇ ಬ್ಯಾಚ್ ಜಾರಿಯಲ್ಲಿದೆ, ಶೀಘ್ರದಲ್ಲೇ ಆರನೇ ಬ್ಯಾಚ್‌ ಪ್ರಾರಂಭಿಸಲಾಗುವುದು.

ಮಹಿಳೆಯರಿಗೆ ಖುರ್‌ಆನ್ ಪಾರಾಯಣ ತರಬೇತಿ ಕಲಿಸುವ ಮುಜವ್ವಿದಾ ಮೂರು ತಿಂಗಳ ಆನ್ಲೈಲ್ ಕೋರ್ಸಾಗಿದ್ದು ಇದರ ನಾಲ್ಕು ಬ್ಯಾಚ್‌ಗಳು ಹೊರಬಂದಿದೆ.

ಇದಲ್ಲದೆ ಶರೀಅತ್ ಕಾಲೇಜುಗಳಿಗೆ ವ್ಯವಸ್ಥಿತ ಪಠ್ಯ ಕ್ರಮ ಹಾಗೂ ಪಠ್ಯ ಪುಸ್ತಕಗಳನ್ನು ಸಹ ಕೌನ್ಸಿಲ್ ವತಿಯಿಂದ ಪ್ರಕಟಿಸಲಾಗಿದೆ ಎಂದು ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಪ್ರಧಾನ‌ ಕಾರ್ಯದರ್ಶಿ ಎಂ.ಇ.ಉಮರ್ ಸಖಾಫಿ ಎಡಪ್ಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com