janadhvani

Kannada Online News Paper

ರೆಸಿಡೆನ್ಸಿ ವಿಸಾ ಪಡೆಯದವರಿಂದ ಕೆಲಸ ಮಾಡಿಸುವಂತಿಲ್ಲ- ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟನೆ

Initial Work Permit ಆಧಾರದ ಮೇಲೆ ಮಾತ್ರ ಕೆಲಸ ಪ್ರಾರಂಭಿಸಲು ಕಂಪನಿಗಳು ಅವಕಾಶ ನೀಡಬಾರದು

ದುಬೈ: ಇಮಿಗ್ರೇಷನ್‌ನಿಂದ ನಿವಾಸ ವೀಸಾ ಪಡೆಯದ ಹೊರತು ಹೊಸ ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ನೀಡದಂತೆ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಯುಎಇ ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯ(USE Ministry of Human resources and Emiratisation) ದ ವೆಬ್‌ಸೈಟ್ ಮೂಲಕ ಇದನ್ನು ಸ್ಪಷ್ಟಪಡಿಸಲಾಗಿದೆ.

ಹೊಸ ಉದ್ಯೋಗಿಗೆ ರೆಸಿಡೆನ್ಸಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಮಾತ್ರ ಆರಂಭಿಕ ಪರವಾನಗಿ(Initial Work Permit) ಯನ್ನು ನೀಡಲಾಗುತ್ತದೆ, ಇದರ ಆಧಾರದ ಮೇಲೆ ಮಾತ್ರ ಕೆಲಸ ಪ್ರಾರಂಭಿಸಲು ಕಂಪನಿಗಳು ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸುವ ಭಾಗವಾಗಿ ಸಚಿವಾಲಯವು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಕೆಲಸದ ಪರವಾನಿಗೆ ಅರ್ಜಿಗಳನ್ನು ಅನುಮೋದಿಸಲು ಉದ್ಯೋಗದಾತರು ಪೂರೈಸಬೇಕಾದ ಐದು ಮುಖ್ಯ ಷರತ್ತುಗಳನ್ನು ಸಚಿವಾಲಯ ವಿವರಿಸಿದೆ.

1. ಉದ್ಯೋಗದಾತ ಮತ್ತು ಕೆಲಸಗಾರನ ನಡುವಿನ ಉದ್ಯೋಗ ಸಂಬಂಧವನ್ನು ಸೂಚಿಸುವ, ಇಬ್ಬರೂ ಸಹಿ ಮಾಡಿದ, ಕೆಲಸದ ಪ್ರಸ್ತಾಪವನ್ನು(Work Offer) ಸಲ್ಲಿಸಬೇಕು.

2. ಉದ್ಯೋಗಿಗೆ
ಮತ್ತೊಂದು ಕಂಪನಿಯಲ್ಲಿ ಅಸ್ತಿತ್ವದಲ್ಲಿರುವ ಕೆಲಸದ ಪರವಾನಗಿ ಅಥವಾ ಕಾರ್ಡ್ ಇಲ್ಲವೆಂಬುದನ್ನು ಪರಿಶೀಲಿಸಬೇಕು.

3. ಉದ್ಯೋಗಿ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಎಂದು ಖಚಿತಪಡಿಸಿಕೊಳ್ಳಬೇಕು.

4. ಉದ್ಯೋಗಿಗೆ ನೀಡಬೇಕಾದ ಕೆಲಸವು ಸ್ಥಾಪನೆಯ ಕೆಲಸಕ್ಕೆ ಅನುಗುಣವಾಗಿರಬೇಕು.

5. ದೇಶದ ಮಾನ್ಯತೆ ಪಡೆದ ಬ್ಯಾಂಕ್‌ಗಳ ಮೂಲಕ ಸಚಿವಾಲಯದ ಬ್ಯಾಂಕ್ ಖಾತೆಯಲ್ಲಿ ಪ್ರತಿ ಉದ್ಯೋಗಿಗೆ 3,000 ದಿರ್ಹಮ್‌ಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕು. ವರ್ಕ್ ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸುವಾಗ, ಒಬ್ಬರು ಅಗತ್ಯವಾದ ವೃತ್ತಿಪರ ಅರ್ಹತೆ ಅಥವಾ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com