janadhvani

Kannada Online News Paper

ವಕ್ಫ್ ಬೋರ್ಡ್ ಅಧ್ಯಕ್ಷರ ವಿರುದ್ದ ನಿಂದನಾತ್ಮಕ ಪೋಸ್ಟ್- ಸೈಬರ್ ಠಾಣೆಯಲ್ಲಿ ಕೇಸ್ ದಾಖಲು

ನಕಲಿ ಫೇಸ್ಬುಕ್ ಖಾತೆ ಹಾಗೂ ವಾಟ್ಸಾಪ್ ಮೂಲಕ ಅಪಪ್ರಚಾರದಲ್ಲಿ ತೊಡಿಗಿಸಿಕೊಂಡವರ ವಿರುದ್ಧ ದೂರು

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ವಿರುದ್ದ ನಿಂದಾನಾತ್ಮಕವಾಗಿ ನಕಲಿ ಫೇಸ್ಬುಕ್ ಖಾತೆ ಹಾಗೂ ವಾಟ್ಸಾಪ್ ಮೂಲಕ ಅಪಪ್ರಚಾರದಲ್ಲಿ ತೊಡಿಗಿಸಿಕೊಂಡವರ ವಿರುದ್ಧ ಗುಲ್ಬರ್ಗ ಮೂಲದ ಸಾಮಾಜಿಕ ಕಾರ್ಯಕರ್ತ ಎಸ್ ಎಮ್ ಹಬೀಬುದ್ದೀನ್ ಸರ್ಮತ್ ಎಂಬುವವರು ಸೈಬರ್ ಪೋಲೀಸ್ ಇಲಾಖೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

ವಕ್ಫ್ ಇಲಾಖೆಯು ಕರ್ನಾಟಕದ ಇತಿಹಾಸದಲ್ಲೇ ಭ್ರಷ್ಟಾಚಾರ ಮುಕ್ತವಾಗಿ ,ಅತೀ ಹೆಚ್ಚು ಪ್ರಗತಿಯನ್ನು ಸಾಧಿಸಿದ್ದನ್ನು ಅರಗಿಸಿಕೊಳ್ಳಲಾಗದ ದುರುಳರು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುದಾಗಿ. ಹಬೀಬುದ್ದೀನ್ ಸಮರ್ತ್ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.

error: Content is protected !! Not allowed copy content from janadhvani.com