janadhvani

Kannada Online News Paper

ಸೌದಿ: ಕಾರ್ಮಿಕರ ಮಧ್ಯೆ ಯಾವುದೇ ರೀತಿಯ ತಾರತಮ್ಯ, ಕಾನೂನು ಉಲ್ಲಂಘನೆ- ಸಚಿವಾಲಯ

ಉದ್ಯೋಗದಾತರು ಸಂಬಳ ನೀಡಲು ವಿಳಂಬ ಮಾಡುವುದು ಸಹ ಉಲ್ಲಂಘನೆಯಾಗಿದೆ.

ರಿಯಾದ್: ಉದ್ಯೋಗದಾತರು ಕಾರ್ಮಿಕರ ಮಧ್ಯೆ ಯಾವುದೇ ರೀತಿಯ ತಾರತಮ್ಯ ತೋರಿದರೆ ಅದನ್ನು ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ(Saudi Ministry of Human Resources and Social Development) ಹೇಳಿದೆ.

ತಾರತಮ್ಯದ ರೂಪದಲ್ಲಿ ಉಲ್ಲಂಘನೆ ನಡೆಸಿದರೆ ಉದ್ಯೋಗದಾತರ ವಿರುದ್ಧ ದೂರು ನೀಡಲು ಉದ್ಯೋಗಿಗೆ ಹಕ್ಕಿದೆ ಎಂದು ಸಚಿವಾಲಯ ಹೇಳಿದೆ.

ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಏಕೀಕೃತ ವ್ಯವಸ್ಥೆಯ ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿದೆ. ಮಾನವ ಸಂಪನ್ಮೂಲ ಸಚಿವಾಲಯವು ಟ್ವಿಟರ್ ಮೂಲಕ ವ್ಯಕ್ತಿಯೊಬ್ಬರ ವಿಚಾರಣೆಗೆ ಪ್ರತಿಕ್ರಿಯೆಯಾಗಿ ಇದನ್ನು ಸ್ಪಷ್ಟಪಡಿಸಿದ್ದು,ದೂರನ್ನು ಸಚಿವಾಲಯ ಪರಿಶೀಲಿಸುತ್ತದೆ ಎಂದು ಹೇಳಿದೆ.

ಉದ್ಯೋಗದಾತರು ಸಂಬಳ ನೀಡಲು ವಿಳಂಬ ಮಾಡುವುದು ಸಹ ಉಲ್ಲಂಘನೆಯಾಗಿದೆ. ಈ ಸಂಬಂಧವಾಗಿಯೂ ಕಾರ್ಮಿಕರು ದೂರು ದಾಖಲಿಸಬಹುದು ಎಂದೂ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com