janadhvani

Kannada Online News Paper

ತನಾಫುಸ್ – KCF ದುಬೈ ನೋರ್ತ್ ಝೋನ್ ಸ್ಪೋರ್ಟ್ಸ್ ಡೇ

ದುಬೈ : ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನೋರ್ತ್ ಝೋನ್ ವತಿಯಿಂದ “ತನಾಫುಸ್-2023 ಸ್ಪೋರ್ಟ್ಸ್ ಡೇ” ಫೆ.05 ರಂದು ದುಬೈ ಅಲ್ ವರ್ಕ ಮೈದಾನ್ ನಲ್ಲಿ ನಡೆಯಿತು.
ಮುರಾರ್ ಸೆಕ್ಟರ್ ಅಧ್ಯಕ್ಷರಾದ ಆಶ್ರಫ್ ಮದನಿ ಉಸ್ತಾದರ ದುವಾದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಕೆಸಿಎಫ್ ದುಬೈ ನೋರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಮದನಿ ನಗರ ಉದ್ಘಾಟನೆ ಮಾಡಿದರು. ಅಲ್ ಮುರಾರ್, ಕಿಸೈಸ್, ಹೊರ್ಲಂಝ್, ನೈಫ್, ನಖಿಲ್ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕ್ರಿಕೆಟ್, ವಾಲಿಬಾಲ್, ರಿಲೇ, ಓಟ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚಿನ ಅಂಕ ಪಡೆದು ಅಲ್ ಮುರಾರ್ ತಂಡವು ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡವು. 75 ಕಿಂತ ಹೆಚ್ಚು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.

ಕೊನೆಯಲ್ಲಿ ನಡೆದ ಸಮಾರೋಪ ವೇದಿಕೆಯನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಮೂಸ ಹಾಜಿ ಬಸರ ಉದ್ಘಾಟನೆ ಮಾಡಿದರು.
ಅಬ್ದುಲ್ ಆಝೀಝ್ ಮಿಸ್ಬಾಹಿ ಸಂಘಟನೆಯ ಬಗ್ಗೆ ಹಿತ ನುಡಿದರು. ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ನಾಯಕರಾದ ನಿಯಾಝ್ ಬಸರ, ಶುಕೂರ್ ಮಾಣಿಲ,ಲೆತೀಫ್ ಪಾತೂರ್,ಮಜೀದ್ ಮಂಜನಾಡಿ,ಬಷೀರ್ ಪಡುಬಿದ್ರಿ, ಝುಬೈರ್ ಹಾಜಿ,ಅಲೀ ಅಬ್ಬೆಟು ಹಾಗೂ ಸೆಕ್ಟರ್ ನ ಪ್ರಮುಖ ನಾಯಕರು ಉಪಸ್ಥಿತಿಯಿದ್ದರು.
ಹಬೀಬ್ ಸಜಿಪ ಸ್ವಾಗತಿಸಿದರೆ ಮುಸ್ತಫಾ ಮಾಸ್ಟರ್ ಧನ್ಯವಾದವಿತ್ತರು.

error: Content is protected !! Not allowed copy content from janadhvani.com