ದಮ್ಮಾಮ್: ಕಳೆದ ಶನಿವಾರದಂದು ಅಲ್ ಅಹ್ಸಾ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಮರಣ ಹೊಂದಿದ ರಿಝ್ವಾನ್ ಹಳೆಯಂಗಡಿ ಮತ್ತು ನಾಸಿರ್ ಹುಸೈನ್ ಹಾಗೂ ಕೃಷ್ಣಾಪುರದ ಅಕಿಲ್ ನುಅ್ ಮಾನ್ ರವರ ಮಯ್ಯತ್ ದಫನ ಕಾರ್ಯವು ಇಂದು ಇಶಾ ನಮಾಝ್ ಬಳಿಕ ಜುಬೈಲ್ KFC ಮಸ್ಜಿದ್ ಬಳಿ ನಡೆಯಿತು.


ಮೃತ ಯುವಕರು ಕೆಲಸ ನಿರ್ವಹಿಸುತ್ತಿದ್ದ SAQCO ಕಂಪೆನಿಯ ಮಾಲಕರಾದ ಬಶೀರ್ ಸಾಗರ್ ಅವರು ತನ್ನ ಸ್ವಂತ ಸಹೋದರರ ಮಯ್ಯತ್ ಪರಿಪಾಲನೆಗೆ ಸಹಕರಿಸಿದಂತೆ ಸಕ್ರಿಯರಾಗಿದ್ದರು. ಕಂಪೆನಿಯ ಸಹ ಉದ್ಯೋಗಸ್ಥರು ಮತ್ತು ಗೆಳೆಯರು ಸಹಿತ ನೂರಾರು ಮಂದಿ ಆಗಮಿಸಿ, ಮೃತ ಸಹೋದರರ ಜನಾಝವನ್ನು ದರ್ಶಿಸಿದರು. ಬಳಿಕ ಮಗ್ರಿಬ್ ಇಶಾ ನಮಾಝಿನ ನಡುವೆ ಜುಬೈಲ್ KFC ಬಳಿಯ ಜನಾಝ ಮಸೀದಿಯ ಬಳಿ ದಫನ ಕಾರ್ಯ ನೆರವೇರಿಸಲಾಯಿತು.

ಮೃತ ಯುವಕರ ಅಗಲಿಕೆಗಾಗಿ ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಕೃಷ್ಣಾಪುರ ಜಮಾಅತ್ ಅಧ್ಯಕ್ಷರಾದ ಜನಾಬ್ ಬಿ ಮಮ್ತಾಜ್ ಅಲಿ ಹಾಗೂ ವಖ್ಫ್ ಅಧ್ಯಕ್ಷರಾದ ಶಾಫಿ ಸಅದಿ ಅವರು ಸಂತಾಪವನ್ನು ಸೂಚಿಸಿದ್ದಾರೆ. ಮೃತರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ಪ್ರತ್ಯೇಕ ದುಆ ನಡೆಸುವಂತೆ ಮೃತರ ಕುಟುಂಬಸ್ಥರು ವಿನಂತಿಸಿದ್ದಾರೆ.
ಕಳೆದ ಶನಿವಾರದಂದು ಕೆಲಸಕ್ಕೆಂದು ಸಂಚರಿಸುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹಳೆಯಂಗಡಿ ಕದಿಕೆಯ ರಿಝ್ವಾನ್, ಕೃಷ್ಣಾಪುರದ ಅಕೀಲ್, ನಾಸಿರ್ ಹಾಗೂ ಬಾಂಗ್ಲಾದೇಶದ ಶಿಹಾಬ್ ಎಂಬ ನಾಲ್ವರು ಯುವಕರು ಮೃತಪಟ್ಟಿದ್ದರು.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್