janadhvani

Kannada Online News Paper

ಸೌದಿ ಅರೇಬಿಯಾದ ಸಂಸ್ಥಾಪನಾ ದಿನ: ಫೆಬ್ರವರಿ 22, 23 ರಂದು ಸಾರ್ವಜನಿಕ ರಜೆ ಘೋಷಣೆ

ಸರ್ಕಾರೀ ನೌಕರರಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ.

ರಿಯಾದ್: ಸೌದಿ ಅರೇಬಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಫೆಬ್ರವರಿ 22 ಮತ್ತು 23 ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಸೌದಿ ಸಂಸ್ಥಾಪನಾ ದಿನ ಫೆಬ್ರವರಿ 22 ರಂದು ಖಾಸಗಿ ವಲಯದಲ್ಲಿ ಕೆಲಸ ಮಾಡುವವರು, ಸರ್ಕಾರಿ ನೌಕರರು ಮತ್ತು ನಾನ್ ಪ್ರೋಫಿಟ್ ಸೆಕ್ಟರ್ ಉದ್ಯೋಗಿಗಳಿಗೂ ಅಧಿಕೃತ ರಜೆ ಇರಲಿದೆ.

ಶುಕ್ರವಾರ ಮತ್ತು ಶನಿವಾರ ವಾರಾಂತ್ಯದ ರಜೆಯಾಗಿರುವುದರಿಂದ ಸಂಸ್ಥಾಪನಾ ದಿನದ ನಂತರ ಗುರುವಾರವೂ ಸರ್ಕಾರಿ ನೌಕರರಿಗೆ ಅಧಿಕೃತ ರಜೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸರ್ಕಾರೀ ನೌಕರರಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ.

ಆದಾಗ್ಯೂ,ಆರೋಗ್ಯ ಕ್ಷೇತ್ರ(Health Sector)

ಪೊಲೀಸ್ ಸೇರಿದಂತೆ ಸಶಸ್ತ್ರ ಪಡೆಗಳು.(Armed forces including the police.)

ಬ್ಯಾಂಕಿಂಗ್ ವಲಯ.(Banking sector.)

ಉಪಗುತ್ತಿಗೆ ನೌಕರರು. (Subcontracted Employees.) ಮುಂತಾದ ವಲಯಗಳಿಗೆ ಈ ಪ್ರಕಟಣೆಯು ಅನ್ವಯಿಸುವುದಿಲ್ಲ;

error: Content is protected !! Not allowed copy content from janadhvani.com