janadhvani

Kannada Online News Paper

ನವೀಕರಿಸಿದ ‘ಇಖಾಮಾ’ ಮುದ್ರಿತ ಕಾರ್ಡ್ ಅಗತ್ಯವಿಲ್ಲ- ಜವಾಝಾತ್

ಇಖಾಮಾ ನವೀಕರಣದ ನಂತರ ಹೊಸ ಪ್ರಿಂಟ್ ತೆಗೆದುಕೊಳ್ಳಲು ಜವಾಝಾತ್ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ

ರಿಯಾದ್: ವಲಸಿಗರು ಸೌದಿ ಅರೇಬಿಯಾದಲ್ಲಿ ಇಖಾಮಾದ ಮುದ್ರಿತ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯವಲ್ಲ ಎಂದು ಜವಾಝಾತ್(Jawazat) ಸ್ಪಷ್ಟಪಡಿಸಿದೆ. ಸ್ಮಾರ್ಟ್ ಫೋನ್‌ನಲ್ಲಿ ಲಭ್ಯವಿರುವ ಡಿಜಿಟಲ್ ಇಕಾಮಾವನ್ನು ಬಳಸಬಹುದು. ಇಖಾಮಾ ನವೀಕರಣವು ಮೂರು ದಿನಗಳಿಗಿಂತ ಹೆಚ್ಚು ವಿಳಂಬವಾದರೆ ದಂಡ ವಿಧಿಸಲಾಗುವುದು ಎಂದು ಪಾಸ್‌ಪೋರ್ಟ್ ಇಲಾಖೆ ತಿಳಿಸಿದೆ.

ವಿದೇಶಿಯರ ಇಖಾಮಾವನ್ನು ನವೀಕರಿಸಿದ ನಂತರ, ಇಖಾಮಾವನ್ನು ಕಾರ್ಡ್ ರೂಪದಲ್ಲಿ ಕೊಂಡೊಯ್ಯುವುದು ಕಡ್ಡಾಯವಲ್ಲ. ಬದಲಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುವ ಡಿಜಿಟಲ್ ಇಕಾಮಾ ಸಾಕಾಗಲಿದೆ. ಭದ್ರತಾ ಸಿಬ್ಬಂದಿ ಅಥವಾ ಇತರರು ಪರಿಶೀಲನೆಗಾಗಿ ಇಖಾಮಾವನ್ನು ವಿನಂತಿಸಿದರೂ, ಈ ಡಿಜಿಟಲ್ ಇಕಾಮಾವನ್ನು ತೋರಿಸಿದರೆ ಸಾಕು. ಇಖಾಮಾ ನವೀಕರಣದ ನಂತರ ಹೊಸ ಪ್ರಿಂಟ್ ತೆಗೆದುಕೊಳ್ಳಲು ಜವಾಝಾತ್ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇಖಾಮಾವನ್ನು ನವೀಕರಿಸುವಲ್ಲಿ ಮೂರು ದಿನಗಳಿಗಿಂತ ಹೆಚ್ಚು ವಿಳಂಬವಾದರೆ, ಮೊದಲ ಬಾರಿಗೆ 500 ರಿಯಾಲ್ ಮತ್ತು ಪುನರಾವರ್ತಿಸಿದ್ದಲ್ಲಿ 1000 ರಿಯಾಲ್ ದಂಡವನ್ನು ವಿಧಿಸಲಾಗುತ್ತದೆ.

ಮುಖೀಮ್ ಐಡಿ ವಿತರಿಸಿದ ದಿನಾಂಕದಿಂದ 5 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಇದನ್ನು ಅಬ್ಶೀರ್ (Absher) ಪ್ಲಾಟ್‌ಫಾರ್ಮ್ ಮೂಲಕ ನವೀಕರಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ ಎಂದು ಜವಾಝಾತ್ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com