janadhvani

Kannada Online News Paper

ಜಿದ್ದಾ ವಿಮಾನ ನಿಲ್ದಾಣದಿಂದ ಮಕ್ಕಾದ ಹರಮ್‌ಗೆ ಉಚಿತ ಬಸ್ ಸೇವೆ ಪ್ರಾರಂಭ

ವಿಮಾನ ನಿಲ್ದಾಣದಿಂದ ಮಕ್ಕಾಕ್ಕೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಬಸ್ ಹೊರಡಲಿದೆ

ಜಿದ್ದಾ : ಸೌದಿ ಅರೇಬಿಯಾದ ಜಿದ್ದಾ ವಿಮಾನ ನಿಲ್ದಾಣದಿಂದ ಮಕ್ಕಾದ ಹರಮ್‌ಗೆ ಉಚಿತ ಬಸ್ ಸೇವೆ ಪ್ರಾರಂಭವಾಗೊಳ್ಳಲಿದೆ. ಜಿದ್ದಾ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಶಟಲ್ ಸೇವೆ ಇರಲಿದೆ. ಜಿದ್ದಾದಿಂದ ಬೆಳಗ್ಗೆ 10 ಗಂಟೆಗೆ ಸೇವೆಗಳು ಪ್ರಾರಂಭಗೊಳ್ಳುತ್ತದೆ.

ಜಿದ್ದಾ ಕಿಂಗ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Jeddah King Abdulaziz International Airport )ದ ಹೊಸ ಟರ್ಮಿನಲ್ ಒಂದರಿಂದ ಉಚಿತ ಬಸ್ ಸೇವೆ(Free Shuttle Services) ಕಾರ್ಯನಿರ್ವಹಿಸಲಿದೆ. ಜಿದ್ದಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಯಾತ್ರಾರ್ಥಿಗಳು ಮಕ್ಕಾದ ಹರಮ್ ಮಸೀದಿಯನ್ನು(Grand Mosque in Makkah) ವೇಗವಾಗಿ ತಲುಪುವ ಉದ್ದೇಶದಿಂದ ಹೊಸ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ಪ್ರಯಾಣಿಕರು ಇಹ್ರಾಮ್ ಬಟ್ಟೆಯಲ್ಲೇ ಇರಬೇಕೆಂಬ ನಿಯಮವಿದೆ. ಸೌದಿ ನಾಗರಿಕರು ತಮ್ಮ ರಾಷ್ಟ್ರೀಯ ಗುರುತಿನ ಚೀಟಿಯನ್ನು ತೋರಿಸಬೇಕು ಮತ್ತು ವಿದೇಶಿಗರು ತಮ್ಮ ಪಾಸ್‌ಪೋರ್ಟ್ ನ್ನು ತೋರಿಸಬೇಕು.

ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ, ವಿಮಾನ ನಿಲ್ದಾಣದಿಂದ ಮಕ್ಕಾಕ್ಕೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಬಸ್ ಹೊರಡುತ್ತದೆ. ಮಕ್ಕಾ ಹರಮ್ ಮಸೀದಿಯಿಂದ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12 ರಿಂದ ಮಧ್ಯರಾತ್ರಿ 12 ರವರೆಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಶಟಲ್ ಸೇವೆಯನ್ನು ಏರ್ಪಡಿಸಲಾಗಿದೆ.

ಜಿದ್ದಾದಿಂದ ಹರಮ್ ಮಸೀದಿಗೆ ತ್ವರಿತ ಪ್ರವೇಶಕ್ಕೆ ಅನುಕೂಲವಾಗುವಂತೆ ಎಕ್ಸ್‌ಪ್ರೆಸ್‌ವೇಯ(Jiddah- Makkah Express Way) ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ.

error: Content is protected !! Not allowed copy content from janadhvani.com