ಮಂಗಳೂರು: ಅಮಾಯಕ ಯುವಕನೋರ್ವನ ಫೋಟೋ ಬಳಸಿ ಸಾಮಾಜಿಕ ತಾಣಗಳಲ್ಲಿ ಧ್ವನಿ ಸಂದೇಶವನ್ನು ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಸೆಲ್ ಪೋಲೀಸರಿಗೆ ದೂರು ದಾಖಲಿಸಲು ಚಿಂತನೆ.
ಬೆಂಗಳೂರಿನ ಸೂಪರ್ಮಾರ್ಕೆಟ್ ಒಂದರಲ್ಲಿ ಕೆಲಸ ಮಾಡುತ್ತಿರುವ, ಮೂಲತಃ ಮಂಗಳೂರಿನ ಯುವಕನ ಫೋಟೋವನ್ನು ಬಳಸಿ ವೈಯಕ್ತಿಕ ತೇಜೋವಧೆ ನಡೆಸಿರುವ ವ್ಯಕ್ತಿಯ ವಿರುದ್ಧ ಮಂಗಳೂರು ಮತ್ತು ಬೆಂಗಳೂರು ಸೈಬರ್ ಸೆಲ್ ಪೋಲೀಸರಿಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ.
ಇತ್ತೀಚೆಗೆ ಕೆಲ ಯುವಕರು ಬೆಂಗಳೂರಿಗೆ ತೆರಳಿ ಲಿಂಗ ಪರಿವರ್ತನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಫೋಟೋದಲ್ಲಿರುವ ಯುವಕನಿಗೆ ನಂಟನ್ನು ಕಲ್ಪಿಸಿ ಸಾಮಾಜಿಕ ತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸಿರುವ ವ್ಯಕ್ತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಂತಹಾ ಯಾವುದೇ ನೀಚ ಕೃತ್ಯಗಳಲ್ಲಿ ತೊಡಗಿಕೊಳ್ಳದೆ, ಉತ್ತಮ ಜೀವನ ಸಾಗಿಸುತ್ತಿರುವ ಯುವಕನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಸಮೂಹದೆಡೆಯಲ್ಲಿ ಬಿತ್ತರಿಸಿ, ಯುವಕನ ಬಾಳಿಗೆ ಮಸಿ ಬಳಿಯಲು ಯತ್ನಿಸಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡುವಂತೆ ಯುವಕನನ್ನು ಬಲ್ಲವರು ಒತ್ತಾಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ