janadhvani

Kannada Online News Paper

ಪೆಬ್ರವರಿ 17 ರಿಂದ 25 ರವರೆಗೆ ಕುದ್ರೋಳಿ ಮಾಖಾಂ‌ ಉರೂಸ್

ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ ) ದರ್ಗಾ ಷರೀಫ್ ‌ನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭ ಕಾರ್ಯಕ್ರಮವು 2023 ಪೆಬ್ರವರಿ 17 ರಿಂದ 25 ರವರೆಗೆ ನಡೆಯಲಿದೆ.

ಪೆಬ್ರವರಿ 17 ರಂದು ಮೌಲಿದ್ ಹಾಗೂ ರಾತೀಬ್ ಮಜ್ಲಿಸ್ , 18 ರಂದು ಉದ್ಘಾಟನಾ ಸಮಾರಂಭ, 19 ರಿಂದ 22 ರವರೆಗೆ ಧಾರ್ಮಿಕ ಉಪನ್ಯಾಸ , 23 ಕ್ಕೆ ದ್ಸಿಕ್ರ್ ಮಜ್ಲಿಸ್,24 ಕ್ಕೆ ಬುರ್ಧಾ ಮಜ್ಲಿಸ್ 25 ರಂದು ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಸಾದಾತುಗಳು, ಉಲಮಾಗಳು, ಧಾರ್ಮಿಕ, ಸಾಮಾಜಿಕ ,ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ತಿಳಿಸಿದ್ದಾರೆ.

1
1
1

error: Content is protected !! Not allowed copy content from janadhvani.com