janadhvani

Kannada Online News Paper

ವಿದೇಶೀ ಸುಂದರಿಯ ಪ್ರೇಮದಾಟ: ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ಭಾರತೀಯ ವಲಸಿಗನ 1.5 ಕೋಟಿ ರೂ. ನಷ್ಟ

ಪ್ರೀತಿಯ ನಾಟಕವಾಡಿ ಹಣ ಎಗರಿಸುವ ವಂಚಕರ ಬಗ್ಗೆ ದುಬೈ ಪೋಲೀಸರ ಎಚ್ಚರಿಕೆ

ದುಬೈ: ಪ್ರೀತಿಯ ನೆಪದಲ್ಲಿ ನಕಲಿ ಕ್ರಿಪ್ಟೋಕರೆನ್ಸಿ(Cryptocurrency) ವಹಿವಾಟು ನಡೆಸಿದ ವಲಸಿಗರೊಬ್ಬರು ಅಪಾರ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದಾರೆ. ದುಬೈನಲ್ಲಿ ಐಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಭಾರತೀಯ ವ್ಯಕ್ತಿ (former IT director), ಅಪರಿಚಿತ ಸುಂದರಿಯ ಪರವಾಗಿ 6,50,000 (INR 1.45 ಕೋಟಿಗೂ ಹೆಚ್ಚು) ಹಣವನ್ನು ವರ್ಗಾಯಿಸಿದ್ದಾರೆ. ವಾರಗಳ ನಂತರ ಇದು ವಂಚನೆಯೆಂದು ಪತ್ತೆಯಾಗಿದೆ,ಅನೇಕ ಜನರಿಂದ ಸಾಲ ಪಡೆದ ಹಣ ಸೇರಿದಂತೆ ತನ್ನ ಎಲ್ಲಾ ಉಳಿತಾಯವನ್ನು ಇವರು ಕಳೆದುಕೊಂಡಿದ್ದಾರೆ.

ಹಾಂಕಾಂಗ್‌(Hong-Kong) ಮೊಬೈಲ್ ಸಂಖ್ಯೆಯಿಂದ ಮೊದಲ ವಾಟ್ಸಾಪ್ ಸಂದೇಶವನ್ನು(WhatsApp Message) ವಲಸಿಗ ಸ್ವೀಕರಿಸಿದ್ದರು. ದುಬೈನ ಹೋಟೆಲ್‌ನ ಮ್ಯಾನೇಜರ್ ಆಗಿದ್ದೀರಾ ಎಂಬುದಾಗಿತ್ತು ಮೊದಲ ವಿಚಾರಣೆ. ಅವರು ಇಲ್ಲ ಎಂದು ಉತ್ತರಿಸಿ ಸಂಭಾಷಣೆಯನ್ನು ಕೊನೆಗೊಳಿಸಿದ್ದರು, ಆದರೆ ನಂತರ ಇಬ್ಬರೂ ಮತ್ತೆ ಮೆಸೇಜ್ ಮಾಡಿ ನಿಕಟತೆಯನ್ನು ಸ್ಥಾಪಿಸಿದರು. ಸಂಬಂಧ ಗಟ್ಟಿಯಾಗುತ್ತಿದ್ದಂತೆ 54ರ ಹರೆಯದ ವಲಸಿಗರು ತಮ್ಮ ಫೋಟೋಗಳು ಸೇರಿದಂತೆ ಎಲ್ಲ ವಿವರಗಳನ್ನು ಹಂಚಿದ್ದಾರೆ. ಕೊನೆಗೆ ದುಬೈಗೆ ಬಂದು ಖುದ್ದಾಗಿ ಭೇಟಿಯಾಗುವುದಾಗಿ ಮಹಿಳೆ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಪತ್ನಿಯೊಂದಿಗೆ ಕೆಲ ಸಮಸ್ಯೆ ಎದುರಿಸುತ್ತಿದ್ದ ತನಗೆ ಈ ಮಹಿಳೆಯೊಂದಿಗಿನ ಸಂಭಾಷಣೆ ಸಮಾಧಾನ ತಂದಿತ್ತು ಎಂದು ಹೇಳಿದರು.

ಕೆಲ ದಿನಗಳ ನಂತರ ಯುವತಿ ಮತ್ತೊಬ್ಬ ಯುವತಿಯನ್ನು ತನ್ನ ಸ್ನೇಹಿತೆ ಎಂದು ಪರಿಚಯಿಸಿಕೊಂಡಿದ್ದಾಳೆ. ಅವರು ಮಲೇಷ್ಯಾದಲ್ಲಿ ಕ್ರಿಪ್ಟೋ ಕರೆನ್ಸಿ ವ್ಯಾಪಾರ(Cryptocurrency Trading) ಮಾಡುತ್ತಿದ್ದಾರೆ ಮತ್ತು ತನ್ನ ಸಂಪೂರ್ಣ ಉಳಿತಾಯವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎಂದು ನನಗೆ ನಂಬುವಂತೆ ಮಾಡಿದಳು. ಕ್ರಿಪ್ಟೋ ವಹಿವಾಟಿನ ಮೂಲಕ ಲಾಭ ಗಳಿಸಲು ಸಹಾಯ ಮಾಡುವುದಾಗಿಯೂ ಭರವಸೆ ನೀಡಿದಳು.

ಇದರೊಂದಿಗೆ ಸ್ವಲ್ಪ ಸಂದೇಹ ಬಂದಿತ್ತಾದರೂ, ತಮ್ಮ ಖಾತೆಯನ್ನು ತಾವೇ ನಿರ್ವಹಿಸಬಹುದು ಎಂದು ಹೇಳಿದಾಗ ವಿಶ್ವಾಸ ಮೂಡಿತು. ಅವರು ಕಳುಹಿಸಿದ ಲಿಂಕ್ ಮೂಲಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಖಾತೆಯನ್ನು ರಚಿಸಲಾಯಿತು. ಅವರು ಹೂಡಿಕೆ ಮಾಡಿದ ಹಣದ ಮೇಲೆ ದಿನಕ್ಕೆ 22 ಪ್ರತಿಶತದಷ್ಟು ಲಾಭವನ್ನು ನೀಡುವ 10-ದಿನದ ಯೋಜನೆಗಳನ್ನು ಪರಿಚಯಿಸಲಾಗಿದೆ. ಈ ಬಗ್ಗೆ ಕೆಲವು ಅಂಕಿ-ಅಂಶಗಳು ಮತ್ತು ಕರಪತ್ರಗಳನ್ನು ಕಳುಹಿಸಲಾಗಿದೆ. ಡಿಸೆಂಬರ್ ವೇಳೆಗೆ ಸುಮಾರು 6,61,100 ದಿರ್ಹಮ್‌ಗಳನ್ನು ವಿದೇಶದಲ್ಲಿ ಹೂಡಿಕೆ ಮಾಡಲು ಪಾವತಿಸಲಾಗಿದೆ. ತನ್ನ ಹೆಂಡತಿಗೆ ಗ್ರಾಚ್ಯುಟಿಯಾಗಿ ಪಡೆದ ಹಣ ಸೇರಿದಂತೆ,ತನ್ನ ಸ್ನೇಹಿತರಿಂದಲೂ ಸಾಲ ಪಡೆದು ಹೂಡಿಕೆ ಮಾಡಲಾಗಿದೆ.

ಆದರೆ ಈ ವಹಿವಾಟಿನ ವೇದಿಕೆಯೇ ನಕಲಿ ಎಂದು ನಂತರ ನಾನು ಅರಿತುಕೊಂಡೆ. ಅಂಕಿಅಂಶಗಳನ್ನು ಕೃತಕವಾಗಿ ದೊಡ್ಡ ಲಾಭವೆಂದು ತೋರಿಸಲು ನಿರ್ಮಿಸಿದ ನಕಲಿ ವೇದಿಕೆಯಾಗಿತ್ತು. ಅವರ ಹೂಡಿಕೆಯು ಸುಮಾರು $24,34,602 ಡಾಲರ್ ಗೆ ಬೆಳೆದಿದೆ ಎಂದು ತೋರಿಸಿದೆ. ಸ್ನೇಹಿತೆ ಎಂದು ಪರಿಚಯಿಸಿಕೊಂಡ ಮಹಿಳೆ, ಬಂದ ಹಣದಲ್ಲಿ ಶೇ.10 ಕಮಿಷನ್ ಕೇಳಿದ್ದಾಳೆ ಎಂದು ವಂಚನೆಗೀಡಾದ ವಲಸಿಗ ಹೇಳಿದ್ದಾರೆ. ಈ ಅವಧಿಯಲ್ಲಿ ಅವರು ಇಬ್ಬರು ಯುವತಿಯರೊಂದಿಗೆ ಎಂದಿಗೂ ಮಾತನಾಡಲಿಲ್ಲ ಮತ್ತು ಸಂದೇಶಗಳ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದರು ಎಂದು ಅವರು ಹೇಳುತ್ತಾರೆ.

ಸಂದೇಹ ಬಂದ ಹಿನ್ನೆಲೆಯಲ್ಲಿ, ಹಣ ಹಿಂಪಡೆಯಲು ಯತ್ನಿಸಿದಾಗ ಇಬ್ಬರು ಯುವತಿಯರು ಸ್ಪಂದಿಸಲಿಲ್ಲ.ವಲಸಿಗ,ಸದ್ಯಕ್ಕೆ ಹಣ ವಾಪಸು ಸಿಗಬಹುದೇ ಎಂದು ಪತ್ತೆ ಹಚ್ಚಿ ವಂಚಕರ ಬಗ್ಗೆ ಮಾಹಿತಿ ಪಡೆಯಲು ಯತ್ನಿಸುತ್ತಿದ್ದಾರೆ. ಅವರು ಪ್ರಸ್ತುತ,ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯಬೇಕಾದ ಅವಸ್ಥೆಯಲ್ಲಿದ್ದಾರೆ.

ಜನರು ಪ್ರೀತಿಸುತ್ತಿರುವಂತೆ ನಟಿಸಿ ಪರಿಚಯ ಮಾಡಿಕೊಳ್ಳುತ್ತಾರೆ ಮತ್ತು ನಂತರ ಅದರ ಲಾಭವನ್ನು ಪಡೆದು ದೊಡ್ಡ ಹಣಕಾಸಿನ ವ್ಯವಹಾರಗಳನ್ನು ಮಾಡಲು ಪ್ರೇರೇಪಿಸುವ ಅನೇಕ ಪ್ರಕರಣಗಳಿವೆ. ಸಣ್ಣ ಮೊತ್ತವನ್ನು ಹೂಡಿಕೆ ಮಾಡುವಾಗ ಲಾಭವನ್ನು ಹಿಂತೆಗೆದುಕೊಳ್ಳುವ ಮೂಲಕ ವಿಶ್ವಾಸಾರ್ಹತೆಯನ್ನು ಪಡೆಯಲಾಗುತ್ತದೆ. ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡಲು ಪ್ರೇರೇಪಿಸುವುದು ಮತ್ತು ಹಣವನ್ನು ಸ್ವೀಕರಿಸಿದ ನಂತರ ಕಣ್ಮರೆಯಾಗುವುದು ಅವರ ಸಾಮಾನ್ಯ ಅಭ್ಯಾಸವಾಗಿದೆ ಎಂದು ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com