janadhvani

Kannada Online News Paper

ಕೆಸಿಎಫ್ ಒಮಾನ್ ಇನ್ಸ್ಫಿರಾ – 2018

ಒಮಾನ್:(ಜನಧ್ವನಿ ವಾರ್ತೆ)  ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ಆಶ್ರಯದಲ್ಲಿ ಕೆಸಿಎಫ್ ಸದಸ್ಯರಿಗೆ ಇನ್ಸ್ಫಿರಾ-2018 ಕಾರ್ಯಗಾರವು ಅಲ್ ಫವಾನ್ ಬರ್ಕಾದಲ್ಲಿ ಕೆಸಿಎಫ್ ಒಮನ್ ಗೌರವಾಧ್ಯಕರಾದ ಉಮರ್ ಸಖಾಫಿ ಮಿತ್ತೂರು ಇವರುಗಳ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸ್ ತಂಙಳ್ ರವರು ಅಧ್ಯಕ್ಷತೆ ವಹಿಸಿದರು.

ಮಹಮ್ಮದಲಿ ಬರ್ಕಾ ಕಿರಾಅತ್ ಪಠಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಉರ್ದು ವಿಂಗ್ ಸಂಚಾಲಕ ಶಾಕಿರ್ ಮೌಲಾನ ಅವರು ನೆರವೇರಿಸಿದರು. ನಂತರ ಕಾರ್ಯಗಾರದಲ್ಲಿ ಕರ್ನಾಟಕ ಯಾತ್ರೆಯ ರುವಾರಿ  ಉಮರ್ ಸಖಾಫಿ ಎಡಪ್ಪಾಲ ಕೊಡಗು  ಅವರುಗಳು ಉತ್ತಮ‌ ಸಮಾಜಕ್ಕೆ ಮಾರ್ಗದರ್ಶಕವಾಗಿ ಕೆಸಿಎಫ್ ನ ಯುವ ‌ಸಮೂಹವು ಮುನ್ನೇರಬೇಕು, ಹಾಗೂ ಇನ್ನಿತರ ಧಾರ್ಮಿಕ, ಭೌದ್ದಿಕ ವಿಷಯಗಳ ಬಗ್ಗೆ ಉತ್ತಮ ರೀತಿಯಲ್ಲಿ ಕಾರ್ಯಗಾರ ನಡೆಸಿಕೊಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಸ್ಮಾಯೀಲ್ ಸಖಾಫಿ ಐಸಿಎಫ್ ಬರ್ಕಾ ಸೆಂಟರ್, ಜಮಾಲುದ್ದೀನ್ ಲತೀಫಿ ಸಂಚಾಲಕ ಐಸಿಎಫ್ ಬರ್ಕಾ, ವೈಟೀಮ್ ಚಯೆರ್ಮೆನ್ ಇಕ್ಬಾಲ್ ಬೊಲ್ಮಾರ್ ಬರ್ಕ, ಕೆಸಿಎಫ್ ಒಮಾನ್ ಕೋಶಾಧಿಕಾರಿ ಕಾಸಿಂ ಹಾಜಿ ನಿಝ್ವ ಹಾಗೂ ವಿವಿಧ ವಿಂಗ್ ಗಳ ಅಧ್ಯಕ್ಷರು ಗಳು, ಝೋನ್ ನಾಯಕರುಗಳು ಉಪಸ್ಥಿತರಿದ್ದರು.
ಇನ್ಸ್ಫಿರಾ ಕಾರ್ಯಕ್ರಮದ ಚೀಫ್ ಅಮೀರ್ ಕೆಸಿಎಫ್ ಒಮನ್ ಸಂಘಟನಾಧ್ಯಕ್ಷರಾದ ಹಂಝ ಕನ್ನಂಗಾರ್ ಇವರು ಪ್ರಾಸ್ಥಾವಿಕ ಭಾಷಣ ಮಾಡಿದರು.
ಕೆಸಿಎಫ್ ಒಮನ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಸ್ವಾಗತಿಸಿ, ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ಖಲಂದರ್ ಭಾವ ನಿರೂಪಿಸಿದರು.

error: Content is protected !! Not allowed copy content from janadhvani.com