janadhvani

Kannada Online News Paper

ನಾಳೆ ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ- ಯಶಸ್ವಿಗೊಳಿಸಲು SMA ಕರೆ

ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ, ಆಕ್ರಮಣ, ನೈತಿಕ ಪೋಲಿಸ್ ಗಿರಿ ನಿರಂತರವಾಗಿ ನಡೆಯುತ್ತಿದೆ. ಮುಸ್ಲಿಂ ಯುವಕರ ಮೇಲೆ ದೌರ್ಜನ್ಯ,ಪೊಲೀಸ್ ಅಧಿಕಾರಿಗಳ ದರ್ಪ, ಕೋಮುವಾದಿಗಳ ಅಟ್ಟಹಾಸ ನಡೆಯುತ್ತಿದ್ದರೂ ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗಿದೆ.

ನ್ಯಾಯ ನೀಡಬೇಕಾದ ಅಧಿಕಾರಿಗಳು ವೃತ್ತಿ ಧರ್ಮ ಪಾಲನೆ ಮಾಡದೆ, ಒಂದು ಸಮುದಾಯವನ್ನು ಗುರಿ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕನ್ನು ಕಸಿಯುವ ಪ್ರಯತ್ನವಾಗಿದ್ದು,ಈ ವಿಷಯವನ್ನು ಪ್ರತಿಪಾದಿಸಿ ನ್ಯಾಯಕ್ಕಾಗಿ ಸುನ್ನಿ ಸಂಘಟನೆಗಳ ವತಿಯಿಂದ ಹಕ್ಕೊತ್ತಾಯ ಮಾಡುವ ಬೃಹತ್ ಪ್ರತಿಭಟನೆ ಸಭೆ ನಾಳೆ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನಲ್ಲಿ ನಡೆಯಲಿದ್ದು,ಸರ್ವರು ಬಂದು ಭಾಗವಹಿಸಿ ಧ್ವನಿಗೂಡಿಸಬೇಕೆಂದು ಎಸ್ಎಂಎ ಕರ್ನಾಟಕ ರಾಜ್ಯ ಸಮಿತಿ ಪ್ರತಿಭಟನೆಯನ್ವು ಬೆಂಬಲಿಸಲು ಕರೆ ನೀಡಿದೆ.