janadhvani

Kannada Online News Paper

ಯುಎಇ: ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಎರಡು ಸಾವಿರಕ್ಕೂ ಹೆಚ್ಚು ಕೈದಿಗಳ ಬಿಡುಗಡೆ

ಶಾರ್ಜಾ ಮತ್ತು ಫುಜೈರಾ ಆಡಳಿತಗಾರರು ಹೆಚ್ಚಿನ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಅಬುಧಾಬಿ: ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯುಎಇಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಗಂಭೀರ ಅಪರಾಧಗಳಲ್ಲದ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಲಿದೆ.ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ (Shaikh Muhammad Bin Zayed) ಅವರು 1530 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದರು. ವಿವಿಧ ಅಪರಾಧಗಳಿಗಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ ಕ್ಷಮಾಪಣೆ ಪಡೆದ ಕೈದಿಗಳ ಆರ್ಥಿಕ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ಶೈಖ್ ಮುಹಮ್ಮದ್ ಕರೆ ನೀಡಿದರು. ಕೈದಿಗಳಿಗೆ ಮರುಪರಿಶೀಲನೆ ಮತ್ತು ಹೊಸ ಜೀವನವನ್ನು ನಡೆಸಲು ದಾರಿ ಮಾಡಿಕೊಡುವುದಾಗಿದೆ ಬಿಡುಗಡೆಯ ಉದ್ದೇಶ ಎಂದು ಶೈಖ್ ಹೇಳಿದರು.

ಶಾರ್ಜಾ ಮತ್ತು ಫುಜೈರಾ ಆಡಳಿತಗಾರರು ಹೆಚ್ಚಿನ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದರು. ಶಾರ್ಜಾ ಎಮಿರೇಟ್‌ನಲ್ಲಿ 333 ಮತ್ತು ಫುಜೈರಾದಲ್ಲಿ 153 ಕೈದಿಗಳನ್ನು ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ, ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಫುಜೈರಾದ ಆಡಳಿತಗಾರ ಶೈಖ್ ಹಮದ್ ಬಿನ್ ಮುಹಮ್ಮದ್ ಅಲ್ ಶರ್ಕಿ ಕೂಡ ಆದೇಶ ಹೊರಡಿಸಿದ್ದಾರೆ. ಪ್ರತಿ ವರ್ಷ, ಯುಎಇ ಅಧಿಕಾರಿಗಳು ಹಬ್ಬದ ದಿನಗಳಲ್ಲಿ ಕೈದಿಗಳನ್ನು ಬಿಡುಗಡೆ ಮಾಡುತ್ತಾರೆ.ಭಾರತೀಯರು ಸೇರಿದಂತೆ ಅನೇಕ ವಲಸಿಗರು ಇದರ ಫಲಾನುಭವಿಗಳಾಗಿದ್ದಾರೆ.

error: Content is protected !! Not allowed copy content from janadhvani.com