ನಿತಾಖಾತನ್ನು ಹೆದರುವ ಅಗತ್ಯವಿಲ್ಲ: ಭಾರತೀಯರಿಗೆ ಸದಾ ಸ್ವಾಗತ- ಸೌದಿ ರಾಯಭಾರಿ

ಕೋಝಿಕ್ಕೋಡ್: ನಿತಾಖತ್ ಎಂದರೆ ಸೌದಿ ಅರೇಬಿಯಾದಿಂದ ಭಾರತೀಯರನ್ನು ಅಥವಾ ಬೇರೆ ದೇಶೀಯರನ್ನು ಹೊರಹಾಕಲು ಉಂಟುಮಾಡಿದ ಒಂದು ಕ್ರಮವಲ್ಲ ಎಂದು ಭಾರತದಲ್ಲಿ ಸೌದಿ ಅಂಬಾಸಿಡರ್ ಡಾ. ಸೌದ್ ಬಿನ್ ಮುಹಮ್ಮದ್ ಅಲ್ ಸಾತಿ ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿನ ಕಂಪೆನಿಗಳಲ್ಲಿ ಕೇವಲ 10 ಶೇಕಡಾ ಉದ್ಯೋಗಿಗಳು ಸ್ವದೇಶಿಗಳಾಗಿರಬೇಕು ಎಂಬುದನ್ನು ಜಾರಿಗೊಳಿಸಲಾಗಿದೆ.ನಿತಾಖಾತ್ ಬಂದ ನಂತರ, ದೇಶದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ ಎಂದು ಸೌದ್ ಅಲ್ ಸಾತಿ ತಿಳಿಸಿದರು.

ಯಾವುದೇ ಕಂಪೆನಿ ಮರು ಸಂಘಟಿಸಿದಾಗ ಕೆಲವರು ಉದ್ಯೋಗ ಕಳೆದುಕೊಳ್ಳಬಹುದು. ಅದನ್ನು ನಿತಾಖಾತ್‌ ನೊಂದಿಗೆ ಸಂಬಂಧ ಕಲ್ಪಿಸುವುದು ತಪ್ಪಾಗಿದೆ.

ಸೌದಿ ಅರೇಬಿಯಾ ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳ ಮೂಲಕ ಹಾದು ಹೋಗುತ್ತಿದೆ. ದರ್ಶನ ರೇಖೆ 2030 ರ ಗುರಿಯನ್ನು ಸಾಧಿಸಲು ವೇಗವಾಗಿ ಮುನ್ನುಗ್ಗುತ್ತಿದೆ.ವಾಸ್ತವದಲ್ಲಿ  ಇದು ಭಾರತೀಯರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯುತ್ತಿದೆ.

ವಸತಿ ಮತ್ತು ನಿರ್ಮಾಣ ವಲಯಗಳಲ್ಲಿ ಮಾತ್ರ 100 ಶತಕೋಟಿ ಡಾಲರ್ ಹೂಡಿಕೆಯನ್ನು 2025ರೊಳಗೆ ನಿರೀಕ್ಷಿಸಲಾಗಿದೆ.ಭಾರತೀಯ ಕಂಪನಿಗಳು ಮತ್ತು ಭಾರತೀಯ ಕಾರ್ಮಿಕರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ.

ಆರೋಗ್ಯ ರಕ್ಷಣೆ, ಔಷಧಿ ಮತ್ತು ಫಾರ್ಮಸಿ ವಲಯಗಳಿಗೆ ಭಾರತದಿಂದ ಅತ್ಯುತ್ತಮ ವೃತ್ತಿಪರರ ಅಗತ್ಯವು ಸೌದಿಗಿದೆ.ಐಟಿ ಮತ್ತು ಇಂಜಿನಿಯರಿಂಗ್ ವಲಯಗಳಿಗೂ ಭಾರತೀಯರನ್ನು ಸೌದಿ ಸ್ವಾಗತಿಸುತ್ತಿದೆ.

ಇದಲ್ಲದೆ, ಸೌದಿಯು ಭಾರತದೊಂದಿಗೆ ಶಕ್ತಿ ಕ್ಷೇತ್ರವನ್ನು ಒಳಗೊಂಡಂತೆ ವ್ಯಾಪಕವಾದ ಸಹಕಾರವನ್ನು ಹೊಂದಿದೆ.ಅರಾಮ್ಕೊ ಮೂರು ಭಾರತೀಯ ಕಂಪೆನಿಗಳೊಂದಿಗೆ ಒಪ್ಪಂದದಲ್ಲಿ ಏರ್ಪಟ್ಟಿದ್ದು ಇತ್ತೀಚಿನ ಉದಾಹರಣೆಯಾಗಿದೆ. ಕೃಷಿ ಉತ್ಪನ್ನಗಳು, ವಿದ್ಯುನ್ಮಾನ ಉತ್ಪನ್ನಗಳು ಮತ್ತು ಕಾರುಗಳನ್ನು ಭಾರತದಿಂದ ಸೌದಿ ಅರೇಬಿಯಾಕ್ಕೆ ರಫ್ತು ಮಾಡಲಾಗುತ್ತದೆ.

ಕೇರಳದಲ್ಲಿ ಸೌದಿ ದೂತಾವಾಸದ ಅವಶ್ಯಕತೆ ಬಗ್ಗೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದು,ಈ  ಬಗ್ಗೆ ಸೌದಿ ಸರಕಾರಕ್ಕೆ ತಿಳಿಸುವುದಾಗಿ ಡಾ. ಸೌದ್ ಅಲ್ ಸಾತಿ ಹೇಳಿದರು.

One thought on “ನಿತಾಖಾತನ್ನು ಹೆದರುವ ಅಗತ್ಯವಿಲ್ಲ: ಭಾರತೀಯರಿಗೆ ಸದಾ ಸ್ವಾಗತ- ಸೌದಿ ರಾಯಭಾರಿ

  1. ಈತನ ಮಾತು ಕೇಳಿ ಹೋಗ್ಬೇಡಿ,ಭಿಕ್ಷುಕನ ಪಾತ್ರೆಗೆ ಕೈ ಹಾಕುವ ವರ್ಗ ಅಲ್ಲಿದೆ. (ಅನುಭವ)

Leave a Reply

Your email address will not be published. Required fields are marked *

error: Content is protected !!