janadhvani

Kannada Online News Paper

‘ನಮ್ಮ ಕುಟುಂಬ’ ವಾಟ್ಸಪ್ ಗ್ರೂಪ್: ಮದೀನಾ ನಿಲಾವು-22 ಹಾಗೂ ಇಸ್ಲಾಮಿಕ್ ಕಲಾ ಸಾಹಿತ್ಯೋತ್ಸವ

ಮುತ್ತು ರಸೂಲ್ﷺِ ರ ಜನ್ಮದಿನಾಚರಣೆಯ ಪ್ರಯುಕ್ತ ‘ನಮ್ಮ ಕುಟುಂಬ’ ವಾಟ್ಸಪ್ ಗ್ರೂಪ್ ಆಯೋಜಿಸಿದ ಮದೀನಾ ನಿಲಾವು 2k22 ಹಾಗು ಇಸ್ಲಾಮಿಕ್ ಕಲಾ ಸಾಹಿತ್ಯೋತ್ಸವ ಆನ್ಲೈನ್ ಕಾರ್ಯವು ಅ.23 ರಂದು ನಡೆಯಿತು.ನಮ್ಮ ಕುಟುಂಬ ವಾಟ್ಸಪ್ ಗ್ರೂಪ್ ಇದರ ಮಾರ್ಗದರ್ಶಕರು, ಗ್ರೂಪ್ ನಿರ್ವಾಹಕರಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪೆರುವಾಯಿ ರವರು ದುಆಃ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.’ನಮ್ಮ ಕುಟುಂಬ’ ದ ಸುಮಾರು 35 ಕ್ಕೂ ಹೆಚ್ಚು ಮಕ್ಕಳು, ಹಿರಿಯರು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.ಕಾರ್ಯಕ್ರಮ ಕ್ರಮದ ಮೊದಲಿಗೆ ಎಸ್,ಎಸ್,ಎಫ್ ರಾಜ್ಯ ಸಮಿತಿ ಕೋಶಾಧಿಕಾರಿ ಮೌಲಾನ ಸುಫ್ಯಾನ್ ಸಖಾಫಿ, ಹಿರಿಯ ಸಾಹಿತಿ,ಖ್ಯಾತ ಬರಹಗಾರರೂ ಆದ ಸಾಲೆತ್ತೂರು ಫೈಝಿ, ಶಿಕ್ಷಣ ತಜ್ಞರಾದ ಜನಾಬ್ ರಫೀಕ್ ಮಾಸ್ಟರ್ , ಎಸ್,ಕೆ ಎಸ್,ಎಸ್,ಎಫ್ ರಾಜ್ಯ ಸಮಿತಿ ಸದಸ್ಯರಾದ ಜನಾಬ್ ಬಶೀರ್ ಅರಂಬೂರು ಮುಂತಾದವರು, ನಮ್ಮ ಮಕ್ಕಳ ಪ್ರತಿಭೆಗಳಿಗೆ ನಾವು ಹೇಗೆ ಸ್ಪಂದನೆ ನೀಡಬೇಕು, ಎಂಬುದರ ಬಗ್ಗೆ ಉಪದೇಶ, ನಿರ್ದೇಶಗಳನ್ನು ಸಂದೇಶದ ಮೂಲಕ ತಿಳಿಸಿದರು.ಬಹಳ ಅಚ್ಚುಕಟ್ಟಾಗಿ ಎರಡು ದಿನಗಳಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ, ‘ನಮ್ಮ ಕುಟುಂಬ’ ದ ಮಕ್ಕಳು,ಸ್ತ್ರೀ, ಪುರುಷರಿಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮೌಲಿದ್ ಮಜ್ಲಿಸ್, ಬುರ್ದಾ,ಮತ್ತು ರಸೂಲ್ﷺِ ರ ಮದ್ಹ್ ಹಾಡು,ಪ್ರಭಂಧ,ಅರೇಬಿಕ್ ಕಾಲಿಗ್ರಾಫಿ, ಚಿತ್ರ ಕಲೆ ಮುಂತಾದ ಹಲವು ಕಲೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.ವರದಿ: ಅಬೂ ಅಯಾನ್ ಕೊಡಂಗಾಯಿ.

error: Content is protected !! Not allowed copy content from janadhvani.com