janadhvani

Kannada Online News Paper

ದಾರುನ್ನಜಾತ್ ಎಜುಕೇಶನಲ್ ಸೆಂಟರ್ ‘ಇಲಲ್ ಹಬೀಬ್’ ಮೀಲಾದ್ ಕಾರ್ಯಕ್ರಮ ಯಶಸ್ವಿ

ವಿಟ್ಲ: ಇಲ್ಲಿನ ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ವಿದ್ಯಾ ಸಂಸ್ಥೆಯಲ್ಲಿ ಅಕ್ಟೋಬರ್ 15 ರಂದು ಸಂಜೆ 4 ಗಂಟೆಗೆ ದಾರುನ್ನಜಾತ್ ದರ್ಸ್ ವಿದ್ಯಾರ್ಥಿಗಳ ಮತ್ತು ಅಲ್ ಮದ್ರಸತುನ್ನವವಿಯ್ಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಹಳ ಯಶಸ್ವಿಯಾಗಿ ಇಲಲ್ ಹಬೀಬ್ ಮಿಲಾದ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹ್ಮೂದುಲ್ ಫೈಝಿ ನಿರ್ವಹಿಸಿದರು.ಸಯ್ಯಿದ್ ಶಮೀಮ್ ಅಲ್ ಬುಖಾರಿ ತಂಙಳ್ ಅಹ್ಸನಿ ಮುದರಿಸ್ ದಾರುನ್ನಜಾತ್ ದುಆ ನಡೆಸಿದರು.ಅಬ್ದುಲ್ ಖಾದರ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಧ ಕಾರ್ಯಕ್ರಮದಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ ಮೆಮೆಂಟೋ ವಿತರಿಸಿದರು. ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಸಅದಿ ಸ್ವಾಗತಿಸಿದರು. ಕಳೆದ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದ ಮತ್ತು ಇಲಲ್ ಹಬೀಬ್ ಮಿಲಾದ್ ಕಾರ್ಯಕ್ರಮ ಭಾಗವಹಿಸಿದಂತಹಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಡಾ| ಹಸೈನಾರ್ ಟಿಪ್ಪು ನಗರ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ, SMA ವಿಟ್ಲ ರೀಜಿನಲ್ ಅಧ್ಯಕ್ಷರಾದ ಹಕೀಮ್ ಶಾಂತಿನಗರ, ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ, ಉಸ್ಮಾನ್ ಹಾಜಿ ಟಿಪ್ಪು ನಗರ, ಅಶ್ರಫ್ ತವಕ್ಕಲ್ ಟಿಪ್ಪು ನಗರ, ಅಬ್ಬಾಸ್ ಟಿಪ್ಪು ನಗರ,ಇಬ್ರಾಹಿಂ(ಮೋನು) ಟಿಪ್ಪು ನಗರ, ಉಪಸ್ಥಿತರಿದ್ದರು. ಹಾಫೀಲ್ ಶರೀಫ್ ಮುಸ್ಲಿಯಾರ್ ವಂದಿಸಿದರು.

error: Content is protected !! Not allowed copy content from janadhvani.com