janadhvani

Kannada Online News Paper

ಕ್ರಿಕೆಟ್‌ನಲ್ಲಿ ಭಾರತಕ್ಕೆ ಗೆಲುವು: ಗುಜರಾತಿನ ಬೆಟ್ಟಿಂಗ್ ಸಮುದಾಯಕ್ಕೆ ಬೇಜಾರು, ಮುಸ್ಲಿಮರಿಗಲ್ಲ- ಕೆ.ಅಶ್ರಫ್

ಮಂಗಳೂರು: ಇತ್ತೀಚೆಗೆ ದ.ಕ.ಜಿಲ್ಲೆಯ ಅಘೋಷಿತ ಆಡಳಿತ ನಿಯಂತ್ರಕರಾದ ಮತ್ತು ಸಾಂಪ್ರಾದಾಯಿಕ ಮುಸ್ಲಿಮ್ ದ್ವೇಷಿ ಕಲ್ಲಡ್ಕ ಪ್ರಭಾಕರ ಭಟ್(Kalladka Prabhakar Bhat) ರವರು ಚಿಕ್ಕಬಳ್ಳಾಪುರದ ಆರ್.ಎಸ್.ಎಸ್.ಕಾರ್ಯಕ್ರಮದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ವಿಜಯಿಯಾಗಿರುವುದರಿಂದ ಕೆಲವರಿಗೆ ಬೇಜಾರು ಆಗಿದೆ, ಎಂದು ಪ್ರಸ್ತಾಪಿಸುತ್ತಾ ಭಾರತದ ಮುಸ್ಲಿಮರ ದೇಶ ಪ್ರೇಮವನ್ನು ಸಂಶಯದ ಮೇಲೆ ತೇಲಿ ಬಿಟ್ಟು ಮತೀಯ ದ್ವೇಷ ಹರಡಲು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದಂತಿದೆ.

ಭಟ್ಟರು ಹೇಳಿದ್ದು,ಬಹುಶ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಕಾರಣವೇನೆಂದರೆ,ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದಿಂದ ಲಾಭ ಪಡೆಯುವ ಒಂದು ಸಮುದಾಯ ಇದ್ದರೆ,ಅದು ಗುಜಾರತಿನ ಬೆಟ್ಟಿಂಗ್ ಸಮುದಾಯ, ಬಹುಶ ಭಾರತ ವಿಜಯಿಯಾದ ಕಾರಣದಿಂದ ಗುಜರಾತಿನ ಬೆಟ್ಟಿಂಗ್ ಸಮುದಾಯಕ್ಕೆ ಬೇಜಾರು ಸೃಷ್ಟಿಯಾಗಿರುವ ಸಾದ್ಯತೆ ಹೆಚ್ಚಿದೆ. ಬೆಟ್ಟಿಂಗ್ ಸಮುದಾಯ ಕಲ್ಲಡ್ಕ ಭಟ್ ರವರ ಆತ್ಮೀಯ ಸಮುದಾಯವೂ ಹೌದು.

ಮುಂದುವರಿದು,ಸ್ವತಃ ಕಲ್ಲಡ್ಕ ಪ್ರಭಾಕರ ಭಟ್ ರವರು ಖುದ್ದಾಗಿ ಕ್ರಿಕೆಟ್ ಪಂದ್ಯ ಆಡಿ ಭಾರತವನ್ನು ಗೆಲ್ಲಿಸುತ್ತಿದರೆ,ಮುಸ್ಲಿಮರು ಭಟ್ ಅವರಿಗೆ ನಾಗರಿಕ ಸನ್ಮಾನ ಮಾಡುತ್ತಿದ್ದೆವು. ಭಟ್ ರವರು ಮುಸ್ಲಿಮ್ ಸಮುದಾಯವನ್ನು ಅವಹೇಳನ ಮಾಡುವ ಸಮಯವನ್ನು ಕ್ರಿಕೆಟ್ ತರಬೇತಿ ಮತ್ತು ಆಟದಲ್ಲಿ ವಿನಿಯೋಗಿಸುತ್ತಿದ್ದರೆ , ಕಲ್ಲಡ್ಕ ಪ್ರಭಾಕರ್ ಭಟ್ ನೇತ್ರತ್ಞದಲ್ಲಿ ಇಂದು ಭಾರತ ಕ್ರಿಕೆಟ್ ತಂಡ, ಈವರೆಗೆ ಜರುಗಿದ ಪಾಕಿಸ್ತಾನದ ವಿರುದ್ಧದ ಎಲ್ಲ ಪಂದ್ಯಗಳು ನಿರಾಸಾಯವಾಗಿ ವಿಜಯಿಯಾಗುತ್ತಿತ್ತು.ಕಲ್ಲಡ್ಕ ಪ್ರಭಾಕರ್ ಭಟ್ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗದೆ ಇದ್ದುದ್ದು, ಭಾರತದ ಮುಸ್ಲಿಮರ ದುರಾದೃಷ್ಟವೆ ಆಗಿದೆ.ಇದಕ್ಕಿಂತ ಹೆಚ್ಚಿನ ಬೇಜಾರು ಭಾರತದ ಮುಸಲ್ಮಾನರಿಗೆ ಇನ್ನೇನಿದೆ ಎಂದು ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಭಟ್ಟರಿಗೆ ತಿರುಗೇಟು ನೀಡಿದ್ದಾರೆ.

error: Content is protected !! Not allowed copy content from janadhvani.com