ಮಂಗಳೂರು: ಅಲ್ ಮದೀನಾ ಮಂಜನಾಡಿ ಸಂಸ್ಥೆಯಲ್ಲಿ ಕಲಿಯುತ್ತಿರುವ ದಅ್‌ವಾ ವಿದ್ಯಾರ್ಥಿಗಳು ರಾಜ್ಯಾದ್ಯಂತ ಮಾದಕ ವ್ಯಸನಗಳ ವಿರುದ್ಧ ಸುಮಾರು ಸಾವಿರ ಕಿಲೋಮೀಟರ್ ಸಂಚರಿಸಿ ಹಾಗೂ ಪಟ್ಟಣಗಳಲ್ಲಿ, ಪ್ರಮುಖ ಕೇಂದ್ರಗಳಲ್ಲಿ ಕರಪತ್ರ ವಿತರಣೆ ಮೂಲಕ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ನಿರ್ದೇಶನದಂತೆ ನಡೆಯುವ ಈ ಅಭಿಯಾನಕ್ಕೆ ದಅವಾ ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ಸಲಾಂ ಅಹ್ಸನಿ ರವರ ಸಂಪೂರ್ಣ ಸಹಕಾರದೊಂದಿಗೆ ಅಲ್-ಮದೀನಾ ಕ್ಯಾಂಪಸಿನಿಂದ ಆರಂಭಗೊಂಡು ರಾಜ್ಯದ ರಾಜಧಾನಿಯಲ್ಲಿ ಈ ಯಾತ್ರೆಯು ಸಮಾಪ್ತಿ ಗೊಳ್ಳಲಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಜರುಗಿದ ಬೃಹತ್ ಹುಬ್ಬುರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಇದರ ಭಾಗವಾಗಿ ಮಾದಕ ವ್ಯಸನಗಳ ಬಗ್ಗೆ ನೌಫಲ್ ಮರ್ಝೂಖಿ ಭಾಷಣಗೈದರು, ದಅವಾ ಕಾಲೇಜು ವಿದ್ಯಾರ್ಥಿಗಳಿಂದ ಘೋಷವಾಕ್ಯ, ಅನ್ವರ್ ಮರ್ಝೂಖಿ ಮತ್ತು ತಂಡದಿಂದ ಕ್ರಾಂತಿ ಗೀತೆಯು ವೇದಿಕೆಯಲ್ಲಿ ನಡೆಯಿತು.

ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಮಾದಕ ವ್ಯಸನ ಗಳಿಂದ ಉಂಟಾಗುವ ಪರಿಣಾಮವನ್ನು ವಿವರಿಸುವ ಸೈನ್ಸ್ ಮಾಡಲ್, ಹಾಗೂ ಬಿತ್ತಿ ಪತ್ರಗಳನ್ನು ಬರೆದು ತೂಗು ಹಾಕಿದ್ದು ಸಂದರ್ಶಕರ ಗಮನ ಸೆಳೆಯುತ್ತಿದೆ.
















ಇನ್ನಷ್ಟು ಸುದ್ದಿಗಳು
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್