janadhvani

Kannada Online News Paper

ಸುಳ್ಳು ಸುದ್ದಿಗಳ ವಿರುದ್ದ ಫೇಸ್ ಬುಕ್ ಮತ್ತು ನ್ಯಾಷನಲ್ ಮೀಡಿಯಾ ಕೌನ್ಸಿಲ್ ಕೈಜೋಡಿಸಿಲಿದೆ

ದುಬೈ: ಫೇಸ್ ಬುಕ್ ನ್ನು ಬಳಸಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಯುಎಇ ನ್ಯಾಷನಲ್ ಮೀಡಿಯಾ ಕೌನ್ಸಿಲ್ (ಎನ್ಎಂಸಿ) ಮತ್ತು ಫೇಸ್ ಬುಕ್ ಕೈ ಜೋಡಿಸಲಿದೆ. ಇಬ್ಬರೂ ಜಂಟಿಯಾಗಿ  ದೇಶದ ಪತ್ರಿಕೆಗಳಲ್ಲಿ ಈ ಬಗ್ಗೆ ಪ್ರಚಾರ ಪ್ರಾರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಸುದ್ದಿಯ ವಿಶ್ವಾಸಾರ್ಹತೆಯನ್ನು ಓದುಗರು ಈ ಮೂಲಕ ಸ್ವಯಂ ಮನದಟ್ಟು ಮಾಡಬಹುದು. ಅದು ಹೇಗೆ ಎಂದು ವಿವರಿಸುವ  ರೀತಿಯಲ್ಲಿ ಪತ್ರಿಕಾ ಜಾಹೀರಾತುಗಳನ್ನು ಮಾಡಲಾಗಿದೆ.

ಇದರ ಜೊತೆಗೆ, ಮೊದಲ ಕೆಲವು ದಿನಗಳವರೆಗೆ ಯುಎಇಯಲ್ಲಿ ತನ್ನ ಗ್ರಾಹಕರಿಗೆ ಫೇಸ್ ಬುಕ್ ವಿಶೇಷ ಸೌಲಭ್ಯವನ್ನು ನೀಡಲಿದೆ. ಫೇಸ್ ಬುಕ್‌ನಲ್ಲಿರುವ  ನ್ಯೂಸ್ ಫೀಡ್‌ನಲ್ಲಿ ವಿಶೇಷ ಪರಿಕರ ಲಭ್ಯಗೊಳಿಸಲಿದೆ.ಇದರ ಮೂಲಕ ಸುದ್ದಿ ಕುರಿತು ಹೆಚ್ಚಿನ ಮಾಹಿತಿಯನ್ನು ಫೇಸ್ ಬುಕ್ ಸಹಾಯ ಕೇಂದ್ರದಿಂದ ಪಡೆಯಬಹುದು. ಸುದ್ದಿ ಬಂದ ವೆಬ್‌ಸೈಟ್‌ ನ URL ಪರಿಶೋಧನೆ ಮಾಡಬಹುದು. ಮತ್ತು ಇತರ ಸುದ್ದಿಗಳ ಮೂಲವನ್ನು ಪರಿಶೀಲಿಸಲು ಈ ಸೇವೆಯು ಸಹಾಯ ಮಾಡುತ್ತದೆ.

ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು:

ಸಾಮಾಜಿಕ ಮಾಧ್ಯಮದ ಆಗಮನದಿಂದ ಸುಳ್ಳು ಕಥೆಗಳ ಹರಡುವಿಕೆ ಸರ್ವೇಸಾಮಾನ್ಯವಾಗಿ ಮಾರ್ಪಟ್ಟಿದೆ. ಸುಳ್ಳು ಸುದ್ದಿಗಳು ರಾಜಕೀಯ ಮತ್ತು ಆರ್ಥಿಕ ಆಯಾಮಗಳನ್ನು ಹೊಂದಿದೆ. ಸುಳ್ಳು ಸುದ್ದಿಯಿಂದ ಒಂದು ನಿರ್ದಿಷ್ಟ ವಿಭಾಗವನ್ನು ಅಥವಾ ವ್ಯಕ್ತಿಯನ್ನು ತೇಜೋವಧೆ ಗೊಳಿಸಲು ಪ್ರಯತ್ನಿಸಲಾಗುತ್ತದೆ. ಈ ಸುಳ್ಳು ಸುದ್ದಿಯನ್ನು ಜನರು ನಂಬಿ ಬಿಡುತ್ತಾರೆ. ಇದು ಸಮಾಜದಲ್ಲಿ ಭಾರೀ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಎನ್.ಎಂ.ಸಿ. ನಿರ್ದೇಶಕ ಜನರಲ್ ಮನ್ಸೂರ್ ಅಲ್ ಮನ್ಸೂರಿ ಹೇಳಿದ್ದಾರೆ.

ಯುಎಇಯಲ್ಲಿ ಮಾಧ್ಯಮರಂಗವು ನಿರಂತರವಾಗಿ ಪರಿಶೀಲಿಸಿ, ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಕಠಿಣಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.ಅದರ ಭಾಗವಾಗಿ, ನಾವು ಫೇಸ್ ಬುಕ್ ನೊಂದಿಗೆ ಕೈ ಜೋಡಿಸಿದ್ದೇವೆ.ಎಲೆಕ್ಟ್ರಾನಿಕ್ ಮಾಧ್ಯಮಕ್ಕಾಗಿ ದೇಶದಲ್ಲಿ ಹೊರಡಿಸಿದ ನಿಯಮಗಳು ಮತ್ತು ಮಾನದಂಡಗಳು ಇದಕ್ಕೆ ಉಪಯುಕ್ತವಾಗಲಿವೆ.

ಸಾರ್ವಜನಿಕ ಭದ್ರತೆಗೆ ಪ್ರಾಮುಖ್ಯತೆ ನೀಡುವ ಕಾರಣ ಇದನ್ನು ಸರ್ಕಾರದೊಂದಿಗೆ ಜಾರಿಗೊಳಿಸಲಾಗುತ್ತಿದೆ ಎಂದು ಫೇಸ್ ಬುಕ್ ಮುಖ್ಯಸ್ಥ ನಶ್ವಾ ಅಲಿ ಹೇಳಿದರು.

error: Content is protected !! Not allowed copy content from janadhvani.com