ರಿಯಾದ್: ದೇಶದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ರಂಝಾನ್ ವೇಳಾಪಟ್ಟಿ ಮತ್ತು ಈದ್ ರಜಾದಿನಗಳನ್ನು ಸೌದಿ ಅರೇಬಿಯಾದ ಹಣಕಾಸು ಪ್ರಾಧಿಕಾರ ಘೋಷಿಸಿದೆ.
ರಂಝಾನಿನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ರಂಝಾನ್ 28 (ಜೂನ್ 12) ರಿಂದ ಶವ್ವಾಲ್ 5 (ಜೂನ್ 19) ವರೆಗೆ ಶವ್ವಾಲ್ ಹಬ್ಬದ ರಜಾ ದಿನಗಳಾಗಿರುತ್ತದೆ. ಶವ್ವಾಲ್ 6 (ಜೂನ್20) ರಂದು ಬ್ಯಾಂಕ್ ಕಾರ್ಯಾಚರಣೆ ಆರಂಭಿಸಲಿದೆ.
ಬಕ್ರೀದ್ ಹಬ್ಬದ ರಜಾದಿನಗಳನ್ನು ಕೂಡ ಇದರೊಂದಿಗೆ ಘೋಷಿಸಲಾಗಿದೆ. ಬ್ಯಾಂಕುಗಳ ಕೊನೆಯ ಕೆಲಸದ ದಿನವು ಆಗಸ್ಟ್ 16 (ದುಲ್ ಹಜ್ 5) ಆಗಿದೆ. ಆಗಸ್ಟ್ 26 (ದುಲ್ ಹಜ್ 15) ರಂದು ಬಕ್ರೀದ್ ರಜಾದಿನದ ನಂತರ ಬ್ಯಾಂಕುಗಳು ಕಾರ್ಯಾಚರಣೆಗಳನ್ನು ಪುನರಾರಂಭಿಸಲಿದೆ.