ಅಬುಧಾಬಿ: ಕೆಲಸ ಕಳೆದುಕೊಂಡರೂ ಮೂರು ತಿಂಗಳವರೆಗೆ ಸಂಬಳ ನೀಡುವ ಹೊಸ ವಿಮಾ (Insurance) ಯೋಜನೆಯನ್ನು ಯುಎಇಯಲ್ಲಿ ಆರಂಭಿಸಲಾಗಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವವರೆಗೆ ಅವರನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯ(Ministry Of Human Resources & Emiratisation) ಮಾಹಿತಿ ನೀಡಿದೆ.
ಯುಎಇ ಸೆಂಟ್ರಲ್ ಬ್ಯಾಂಕ್ ಪರವಾನಗಿ ಪಡೆದ ರಾಷ್ಟ್ರೀಯ ವಿಮಾ ಕಂಪನಿಗಳಿಂದ ನಿರುದ್ಯೋಗ ವಿಮೆಯನ್ನು ಜಾರಿಗೊಳಿಸಲಾಗುತ್ತದೆ. ಕೆಲಸ ಕಳೆದುಕೊಂಡರೂ ಶೇ.60ರಷ್ಟು ಸಂಬಳ ಸಿಗಲಿದೆ ಎಂಬುದು ವೈಶಿಷ್ಟ್ಯ. ಈ ಕವರ್ ಗರಿಷ್ಠ ಮೂರು ತಿಂಗಳವರೆಗೆ ಅಥವಾ ನೀವು ಹೊಸ ಉದ್ಯೋಗವನ್ನು ಕಂಡುಕೊಳ್ಳುವವರೆಗೆ ಲಭ್ಯವಿದೆ. ಈ ರೀತಿ ತಿಂಗಳಿಗೆ ಗರಿಷ್ಠ 20,000 ದಿರ್ಹಮ್ ಪಡೆಯಬಹುದು.
ಫಲಾನುಭವಿಗಳು ನಿಗದಿತ ಮೊತ್ತವನ್ನು ಪಾವತಿಸಿ ವಿಮಾ ಯೋಜನೆಗೆ ಸೇರಬೇಕು. ಕನಿಷ್ಠ 12 ತಿಂಗಳ ಉದ್ಯೋಗವನ್ನು ಪೂರ್ಣಗೊಳಿಸಿದ ನಂತರ ತಮ್ಮ ಕೆಲಸವನ್ನು ಕಳೆದುಕೊಳ್ಳುವವರಿಗೆ ಅವರ ಸಂಬಳದ 60 ಪ್ರತಿಶತವನ್ನು ನೀಡಲಾಗುತ್ತದೆ. ವಿಮಾ ಯೋಜನೆಗೆ ಸೇರಿದ ದಿನಾಂಕದಿಂದ ಇದನ್ನು ಲೆಕ್ಕ ಹಾಕಲಾಗುತ್ತದೆ. ಖಾಸಗಿ ವಲಯದ ಮತ್ತು ಫೆಡರಲ್ ಸರ್ಕಾರಿ ನೌಕರರು ಈ ಯೋಜನೆಗೆ ಸೇರಬಹುದಾಗಿದೆ.
ಶಿಸ್ತು ಕ್ರಮದ ಭಾಗವಾಗಿ ವಜಾಗೊಳಿಸಲ್ಪಟ್ಟವರು ಈ ಪ್ರಯೋಜನಗಳನ್ನು ಪಡೆಯುವಂತಿಲ್ಲ. ವಂಚನೆಯಿಂದಲೋ, ಉದ್ಯೋಗ ಮಾಡದ ಕಂಪನಿಗಳ ಹೆಸರಲ್ಲೋ ವಿಮೆ ಹಣ ಪಡೆಯಲು ಯತ್ನಿಸಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು. ಸ್ವಂತ ಉದ್ಯಮ ನಡೆಸುತ್ತಿರುವವರು ಮತ್ತು ಹೂಡಿಕೆದಾರರು ಈ ವಿಮಾ ಯೋಜನೆಗೆ ಸೇರುವಂತಿಲ್ಲ ಎಂದೂ ತಿಳಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ