janadhvani

Kannada Online News Paper

ಶಾರದೋತ್ಸವದ ಪ್ಲೆಕ್ಸ್ ಹರಿದ ಪ್ರಕರಣ- ಸ್ಥಳೀಯ ಸಂಘಪರಿವಾರ ಕಾರ್ಯಕರ್ತರ ಬಂಧನ

ಮಂಗಳೂರು, ಅ.11: ವಾಮಂಜೂರು ಜಂಕ್ಷನ್‌ನಲ್ಲಿ ಹಾಕಲಾದ ಶಾರದೋತ್ಸವದ ಪ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಸ್ಥಳೀಯರೇ ಆದ ಸುಮಿತ್ ಹೆಗ್ಡೆ (25), ಯತೀಶ್ ಪೂಜಾರಿ (24), ಪ್ರವೀಣ್ ಪೂಜಾರಿ (24) ಎಂದು ಗುರುತಿಸಲಾಗಿದೆ. ಇವರು ಸಂಘಪರಿವಾರದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಲಾಗಿದೆ.

ವಾಮಂಜೂರು ಜಂಕ್ಷನ್ ಬಳಿ ಶಾರದೋತ್ಸವ ಕಾರ್ಯಕ್ರಮದ ಬಗ್ಗೆ ವಾಮಂಜೂರು ಫ್ರೆಂಡ್ಸ್ ಎಂಬ ಸಂಘಟನೆಯ ಸದಸ್ಯರು ಪ್ಲೆಕ್ಸ್‌ಗಳನ್ನು ಹಾಕಿದ್ದರು. ಅ.8ರಂದು ಮಧ್ಯರಾತ್ರಿ ಪ್ಲೆಕ್ಸ್‌ನ್ನು ಹರಿದು ಹಾಕಲಾಗಿತ್ತು.

ಧಾರ್ಮಿಕ ಭಾವನೆಗಳಿಗೆ ಅವಮಾನಗೊಳಿಸುವ ಉದ್ದೇಶದಿಂದ ಕೃತ್ಯವನ್ನು ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿತ್ತು. ಅದರಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಅದರಂತೆ ಮಂಗಳವಾರ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ.

error: Content is protected !! Not allowed copy content from janadhvani.com