janadhvani

Kannada Online News Paper

ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟದಿಂದ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ

ಉಳ್ಳಾಲ: ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಆಯೋಜಿಸಿದ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾವು ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ
(ರ) ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಅಳೇಕಲ , ಮಂಚಿಲ, ತೊಕ್ಕೊಟ್ಟು, ಟಿ.ಸಿ. ರೋಡ್, ಅಕ್ಕರೆಕೆರೆ, ಮಾಸ್ತಿಕಟ್ಟೆ, ಮೇಲಂಗಡಿ ಮಾರ್ಗವಾಗಿ ಸಾಗಿ, ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ವಲಿಯುಲ್ಲಾಹಿ ದರ್ಗಾ(ಉಳ್ಳಾಲ)ದಲ್ಲಿ ಸಮಾಪ್ತಿಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಎಂ. ಒ. ಇದರ ಅಧ್ಯಕ್ಷರಾದ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ವಹಿಸಿದ್ದರು. ಕರ್ನಾಟಕ ಸರಕಾರ ವಿಪಕ್ಷ ಉಪ ನಾಯಕ ಜನಾಬ್ ಯು ಟಿ ಖಾದರ್ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಪಟ್ಟಾಂಬಿ ಉಸ್ತಾದ್, ಪಟ್ಲ ಫೈಝಿ ಉಸ್ತಾದ್, ಹಾಜಿ ಯು ಎಸ್ ಹಂಝ ಸಹಿತ ಹಲವಾರು ಉಲಮಾ, ಉಮರಾ ಗಣ್ಯರು, ವಿವಿಧ ಮೊಹಲ್ಲಾ ಗಳ ಪದಾಧಿಕಾರಿಗಳು,ಎಸ್. ಜೆ.ಎಂ. ಪದಾಧಿಕಾರಿಗಳು,
ಎಸ್ ವೈ ಎಸ್, ಎಸ್ ಎಸ್ ಎಫ್ ಪದಾಧಿಕಾರಿಗಳು, ಕಾರ್ಯಕರ್ತರು,
ಮದ್ರಸಾ ಅಧ್ಯಾಪಕರುಗಳು, ರಾಜಕೀಯ ನಾಯಕರುಗಳು, ವಿವಿಧ ಮದ್ರಸ ಗಳ ದಫ್ ತಂಡ, ಮದ್ರಸ ವಿಧ್ಯಾರ್ಥಿಗಳು, ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಅನೇಕ ಪ್ರವಾದಿ ಪ್ರೇಮಿಗಳು ಭಾಗವಹಿಸಿದ್ದರು.