janadhvani

Kannada Online News Paper

ಇಂದು ಕುಪ್ಪೆಪದವಿನಲ್ಲಿ ‘ಸ್ಟೂಡೆಂಟ್ಸ್ ಮೆಹರ್ಜಾನ್-2022’

ಕುಪ್ಪೆಪದವು,ಅ.5: – ಪರಿಶುದ್ಧ ಮೀಲಾದ್ ಪ್ರಯುಕ್ತ ಬದ್ರಿಯಾ ಜುಮಾ ಮಸ್ಜಿದ್ & ಮದೀನತುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸ ಕುಪ್ಪೆಪದವು ಇದರ ಆಶ್ರಯದಲ್ಲಿ 3 ದಿವಸಗಳ ಸ್ಟೂಡೆಂಟ್ಸ್ ಮೆಹರ್ಜಾನ್ ಕಾರ್ಯಕ್ರಮವು ಇಂದಿನಿಂದ ಆರಂಭ ಗೊಳ್ಳಲಿದ್ದು ಸರಿಸುಮಾರು 100 ಕ್ಕೂ ಮಿಕ್ಕ ಸ್ಪರ್ಧೆಗಳು ವೇದಿಕೆ ಮತ್ತು ವೇದಿಕೇತರವಾಗಿ ನಡೆಯಲಿದೆ.

ಅಕ್ಟೋಬರ್ 9 ಆದಿತ್ಯವಾರ ಮುಂಜಾನೆ 4ಕ್ಕೆ ಸರಿಯಾಗಿ ಜಶ್ನೇ ಮೀಲಾದ್,8.30 ಕ್ಕೆ ಸರಿಯಾಗಿ ಧ್ವಜಾರೋಹಣ ಕಾರ್ಯಕ್ರಮ ಇಲಲ್ ಹಬೀಬ್ ಮೀಲಾದ್ ಮಾರ್ಚ್ ,ಕೂಟು ಝಿಯಾರತ್ ಹಾಗೂ ಬೃಹತ್ ,ಹುಬ್ಬುರ್ರಸೂಲ್ ಸಂದೇಶ ಭಾಷಣ , 11 ಕ್ಕೆ ಸರಿಯಾಗಿ ಮೌಲಿದ್ ಪಾರಾಯಣ ನಡೆಯಲಿದೆ ಎಂದು BJM
ಆಡಳಿತ ಸಮಿತಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಬದ್ರಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶರೀಫ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com