ಮಂಗಳೂರು: ಕಾರವಾರ ಜಿಲ್ಲೆಯಲ್ಲಿ ಅಂದು ಸಂಭವಿಸಿದ ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಯುವಕನ ಸಾವನ್ನು, ತಕ್ಷಣ ಕೊಲೆ ಎಂದು ಪರಿವರ್ತಿಸಿ, ನಂತರ ಕೊಲೆಯ ಆರೋಪವನ್ನು ಒಂದು ನಿರ್ಧಿಷ್ಟ ಸಮುದಾಯದ ಮೇಲೆ ಹೊರಿಸಲಾಯಿತು.
ಆಗಾಗಲೇ ಅಭಿವೃದ್ಧಿ ವಿಷಯಗಳ ಬದಲಿಗೆ, ಧರ್ಮ, ನಂಬಿಕೆ, ಅತಿ ದೇಶ ಪ್ರೇಮ ಎಂಬಿತ್ಯಾದಿ ವಿಷಯಗಳ ಅಘೋಷಿತ ಪ್ರಣಾಳಿಕೆ ಹೊಂದಿದ್ದ ಬಿ.ಜೆ.ಪಿ ಪಕ್ಷಕ್ಕೆ ಸಾವುಗಳು ಪ್ರಣಾಳಿಕೆಯಾದವು, ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಸಾವುಗಳನ್ನು ಈ ಪಕ್ಷವು ತನ್ನ ಫಸಲುಗಳಾಗಿ ಪರಿವರ್ತಿಸಿ, ಜನರಿಗೆ ತನ್ನ ಪ್ರಣಾಳಿಕಾ ಪ್ರಯೋಜನವನ್ನು ನೀಡಿತು.
ಅದೇ ಸಂದರ್ಭದಲ್ಲಿ ತಾನು ತನ್ನ ಪಕ್ಷದ ಜನತೆಗೆ ನೀಡಿದ ಭರವಸೆಯ ಅನುಪಾತದಲ್ಲಿ ಆರೋಪಿತ ಸಮುದಾಯದ ಜನತೆಯ, ಆಸ್ತಿ,ಪಾಸ್ತಿ ಗಳನ್ನು ನಷ್ಟ ಪಡಿಸಿತು. ಆರೋಪಿತ ಸಮುದಾಯದ ಜನತೆಗೆ ಅಸುರಕ್ಷಿತತೆ , ಭಯ, ಆತಂಕದ ಕೊಡುಗೆಯನ್ನು ನೀಡಿದೆ.ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಜೀವವು ಪ್ರಕೃತಿಯಲ್ಲಿ ಲೀನವಾಯಿತು.
ಪ್ರಣಾಳಿಕಾ ಪ್ರಯೋಜನಾರ್ಥಿಗಳು ಇಂದು ನಿರಾಳರಾಗಿರುತ್ತಾರೆ. ಪರೇಶ್ ಮೇಸ್ತ ಸಾವಿನ ತನಿಖೆಯೂ ಅಂತ್ಯಗೊಂಡು ತನಿಖಾ ತಂಡ ಸಿ.ಬಿ.ಐ ಸಾವು ಆಕಸ್ಮಿಕ ಎಂದು ಘೋಷಿಸಿದೆ. ಪರೇಶ್ ಮೇಸ್ತ ಹೆಸರಿನಲ್ಲಿ ಚುನಾವಣೆ ಗೆದ್ದ ಬಿ.ಜೆ.ಪಿ ಜನತೆಯ ‘ ಕ್ಷಮೆ ‘ ಕೇಳಬೇಕಿದೆ. ಬಿ.ಜೆ.ಪಿ ತನ್ನ ಮುಂದಿನ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ವಿಷಯವನ್ನು ಪ್ರಮುಖವಾಗಿಸಿ ಚುನಾವಣೆ ಎದುರಿಸಲಿ ಎಂದು ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಹೇಳಿಕೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ