janadhvani

Kannada Online News Paper

ಚಾಲಕ ಮುಸ್ಲಿಂ ಎನ್ನುವ ಕಾರಣ ಕ್ಯಾಬ್ ಹತ್ತಲು ನಿರಾಕರಣೆ-ವ್ಯಾಪಕ ಆಕ್ರೋಶ

ಲಖನೌ:- ಮುಸ್ಲಿಮ್ ಚಾಲಕನಿರುವ ಓಲಾ ಕ್ಯಾಬ್‌ನಲ್ಲಿ ತಾನು ಪ್ರಯಾಣಿಸುವುದಿಲ್ಲ ಎಂದೂ ಉತ್ತರ ಪ್ರದೇಶ ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಸಲಹೆಗಾರರೊಬ್ಬರು ಹೇಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು.ಈ ಬಗ್ಗೆ ಓಲಾ ಕ್ಯಾಬ್ ಸೇವಾ ಸಂಸ್ಥೆಯು ಖಾರವಾಗಿ ಪ್ರತಿಕ್ರಿಯಿಸಿದ್ದು ನಮ್ಮ ಸಂಸ್ಥೆ ಸಂಪೂರ್ಣ ಜಾತ್ಯಾತೀತ, ಕೋಮು ಸೌಹಾರ್ದ ಕೆಡಿಸುವಂತಹ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ ಎಂದಿದೆ.
ಮುಸ್ಲಿಂ ಚಾಲಕನಿದ್ದ ಕ್ಯಾಬ್ ರದ್ದುಪಡಿಸಿದ ಅಭಿಷೇಕ್ ಮಿಶ್ರಾ ಎಂಬುವರು “ನಾನು ನನ್ನ ಹಣವನ್ನು ಜಿಹಾದಿಗಳಿಗೆ ಕೊಡಲು ಇಚ್ಛಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಇವರು ಟ್ವೀಟರ್‌ನಲ್ಲಿ 4000 ಕ್ಕೂ ಹೆಚ್ಚು ಫಾಲೊವಱ್ಸ್‌ನ್ನು ಹೊಂದಿದ್ದು ಅವರಲ್ಲಿ ಕೇಂದ್ರ ಸಚಿವ ರಾಜ್ಯವರ್ಧನಾ ರಾಥೋಡ್, ಆರ್.ಕೆ.ಸಿಂಗ್, ಸುರೇಶ್ ರೈನಾ ಮುಂತಾದವರಿದ್ದಾರೆ.

error: Content is protected !! Not allowed copy content from janadhvani.com