janadhvani

Kannada Online News Paper

ಕೆಸಿಎಫ್ ಒಮಾನ್ ವತಿಯಿಂದ ಬೇಕಲ್ ಉಸ್ತಾದ್(ನ.ಮ) ಅನುಸ್ಮರಣೆ ಹಾಗೂ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್

ಈ ವರದಿಯ ಧ್ವನಿಯನ್ನು ಆಲಿಸಿ

ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಷನ್(KCF) ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಮರ್ಹೂಂ ಶೈಖುನಾ ತಾಜುಲ್ ಫುಖಹಾ ಬೇಕಲ್ ಉಸ್ತಾದ್ (ನ.ಮ) ರವರ ಅನುಸ್ಮರಣೆ ಹಾಗೂ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ಇಕ್ಬಾಲ್ ಬರ್ಕ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಲ್ ಖಾದಿಸ ಕಾವಲ್ ಕಟ್ಟೆ ಸ್ಥಾಪಕರಾದ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್ ಕಾವಲ್ ಕಟ್ಟೆ ರವರು ಬೇಕಲ ಉಸ್ತಾದ್ ರ ಅನುಸ್ಮರಣೆ ಭಾಷಣ ಮತ್ತು ಜಲಾಲಿಯ್ಯಾ ದ್ಸಿಕ್ರ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ಕೆಸಿಎಫ್ ಒಮಾನ್ ಸಂಘಟನಾ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಕೊಟೂರು ಉಸ್ತಾದ್ ಸ್ಥಾಪನೆಯ ಮುದರ್ರಿಸ್ ಮುಹೀನುದ್ದೀನ್ ಪಾಝಿಲಿ ಉದ್ಘಾಟಿಸಿದರು. ಕೆಸಿಎಫ್ ಒಮಾನ್ ಅಧ್ಯಕ್ಷ ರಾದ ಜನಾಬ್ ಅಯ್ಯೂಬ್ ಕೋಡಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ನಾಯಕರಾದ ಇಕ್ಬಾಲ್ ಬರ್ಕ , ಇಬ್ರಾಹಿಮ್ ಹಾಜಿ‌ ಅತ್ರಾಡಿ , ಉಬೈದುಲ್ಲಾ ಸಖಾಫಿ ಮಿತ್ತೂರು, ಹಂಝ ಹಾಜಿ ಕನ್ನಂಗಾರ್, ಉಮರ್ ಸಖಾಫಿ ಎಡಪ್ಪಾಲ , ಕಲಂದರ್ ರಝ್ವಿ ತೀರ್ಥ ಹಳ್ಳಿ,
ಮರ್ಕಝ್ ಮುದರ್ರಿಸ್ ಹಸನ್ ಸಖಾಫಿ, ಐಸಿಎಫ್ ನಾಯಕರಾದ ಹನೀಪ್ ಸಖಾಫಿ, ಹನೀಫ್ ಮದನಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ, ಶಿಕ್ಷಣ ವಿಭಾಗದ ಅಧ್ಯಕ್ಷ ಝುಬೈರ್ ಸ ಅದಿ ಪಾಟ್ರಕೋಡಿ, ಇಹ್ಸಾನ್ ಕರ್ನಾಟಕ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಇರ್ಫಾನ್ ಕೂರ್ನಡ್ಕ, ಆಡಳಿತ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ‌ ಸುಳ್ಯ ಹಾಗೂ ರಾಷ್ಟ್ರೀಯ ನೇತಾರರು ಝೋನ್ ನಾಯಕರು, ಕಾರ್ಯಕರ್ತರು ಉಪಸ್ತಿತರಿದ್ದರು.
ಶಿಕ್ಷಣ ವಿಭಾಗದ ಕಾರ್ಯದರ್ಶಿ ನವಾಝ್ ಮಣಿಪುರ ವಂದಿಸಿ ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com