janadhvani

Kannada Online News Paper

ಮಜೂರು ಸ‌ಅದಿಗೆ ಮಾತೃ ವಿಯೋಗ- ಎಸ್‌ವೈಎಸ್ ತೀವ್ರ ಸಂತಾಪ

ಪುತ್ತೂರು : SჄS ದ.ಕ. ಈಸ್ಟ್ ಜಿಲ್ಲಾಧ್ಯಕ್ಷರಾದ ಕೆ.ಎಸ್. ಅಬೂಬಕರ್ ‌ಸ‌ಅದಿ ಮಜೂರು ರವರ ತಾಯಿ ನೆಫಿಸಾ ಹಜ್ಜುಮ್ಮ (95) ರವರು ಇದೀಗ ಅವರ ಆತೂರು-ಕುದ್ಲೂರಿನ ಮನೆಯಲ್ಲಿ ನಿಧನರಾಗಿರುತ್ತಾರೆ

ಮೃತರು ಮರ್ಹೂಂ ಸುಲೈಮಾನ್ ಹಾಜಿರವರ ಧರ್ಮಪತ್ನಿ ಯಾಗಿರುತ್ತಾರೆ. ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರು, ಝಕರಿಯ್ಯಾ ಫೈಝಿ ಸಹಿತ ಆರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣುಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಆ ತಾಯಿಯ ವಿಯೋಗಕ್ಕೆ ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸಿದೆ. ತಾಯಿಯ ಮಗ್ಫಿರತ್ ಮರ್ಹಮತ್‌ಗಾಗಿ ಪ್ರತಿ ಸೆಂಟರ್, ಬ್ರಾಂಚುಗಳಲ್ಲಿ ತಹ್ಲೀಲ್ ಹಾಗೂ ಕುರ್ಆನ್ ಪಾರಾಯಣ ಮಾಡಿ ವಿಶೇಷ ದುಆಃ ಮಾಡಬೇಕಾಗಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ವಿನಂತಿಸಿದ್ದಾರೆ.

ನಾಳೆ ಬೆಳಗ್ಗೆ 10ಕ್ಕೆ ದಫನ
SჄS ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯ ಮಜೂರು ಅಬೂಬಕರ್ ಸ‌ಅದಿ (ಆತೂರು) ಅವರ ತಾಯಿ,ಇಂದು ಸಾಯಂಕಾಲ ನಿಧನರಾದ ನಫೀಸಾ ಹಜ್ಜುಮ್ಮ(95) ಅವರ ಜನಾಝ ನಮಾಝ್ ಮತ್ತು ದಫನ ಕಾರ್ಯವು ನಾಳೆ (ಸೆಪ್ಟೆಂಬರ್ 8 ಗುರುವಾರ) ಬೆಳಗ್ಗೆ 10 ಗಂಟೆಗೆ, ಸ‌ಅದಿ ಅವರ ಮನೆಯ ಸಮೀಪವಿರುವ ಆತೂರು- ಕುದ್ಲೂರು ಬದ್ರ್ ಜುಮಾ ಮಸ್ಜಿದ್‌ ಖಬರಸ್ಥಾನದಲ್ಲಿ ನಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಆ ಸಮಯದಲ್ಲಿ ಸುನ್ನೀ ಕಾರ್ಯಕರ್ತರು ಗರಿಷ್ಠ ಸಂಖ್ಯೆಯಲ್ಲಿ ಆಗಮಿಸಿ ಮಯ್ಯಿತ್ ನಮಾಝ್ ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕೆಂದು SჄS ರಾಜ್ಯ ಸಮಿತಿ ಮನವಿ ಮಾಡಿದೆ.

error: Content is protected !! Not allowed copy content from janadhvani.com