janadhvani

Kannada Online News Paper

ಸೌದಿ ಇ-ವಿಸಿಟ್ ವೀಸಾ- ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಲಭ್ಯ

ಉದ್ಯೋಗದಾತರ ಅನುಮತಿ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅಗತ್ಯವಿಲ್ಲದ ಕಾರಣ ವೀಸಾ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದೆ

ರಿಯಾದ್: ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಇತರ ಗಲ್ಫ್ ದೇಶಗಳಲ್ಲಿ ರೆಸಿಡೆನ್ಸಿ ದಾಖಲೆಗಳನ್ನು ಹೊಂದಿರುವವರಿಗೆ ಆನ್‌ಲೈನ್ ವೀಸಾಗಳನ್ನು ನೀಡಲಾಗುವುದು ಎಂದು ಸೌದಿ ಪ್ರವಾಸೋದ್ಯಮ ಸಚಿವಾಲಯ ಪ್ರಕಟಿಸಿದೆ. ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಕೆಲವೇ ಗಂಟೆಗಳಲ್ಲಿ ವೀಸಾ ಲಭಿಸಿದೆ.

ಫೋಟೋ ಲಗತ್ತಿಸಲಾದ ಆನ್‌ಲೈನ್ ವೀಸಾವನ್ನು ಇ-ಮೇಲ್ ಮೂಲಕ ಕಳಿಸಲಾಗುತ್ತದೆ. ಸೌದಿ ಡಿಜಿಟಲ್ ರಾಯಭಾರ ಕಚೇರಿಯು ಸೌದಿ ಅರೇಬಿಯಾದಲ್ಲಿ 90 ದಿನಗಳವರೆಗೆ ಇರಲು ಅನುಮತಿಯೊಂದಿಗೆ ಬಹು ಪ್ರವೇಶ (Multi Entry) ವೀಸಾಗಳನ್ನು ನೀಡುತ್ತಿದೆ. ಉದ್ಯೋಗದಾತರ ಅನುಮತಿ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅಗತ್ಯವಿಲ್ಲದ ಕಾರಣ ವೀಸಾ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದೆ ಎಂದು ಅರ್ಜಿದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌದಿ ವಿಸಿಟ್ ವೀಸಾ ಕಾನೂನಿನ ಹೊಸ ಬದಲಾವಣೆಯು ದೇಶದ ವಾಣಿಜ್ಯ ವಲಯದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದೆ. ಇತರ ಗಲ್ಫ್ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸೌದಿ ಅರೇಬಿಯಾಕ್ಕೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಕುಟುಂಬದೊಂದಿಗೆಯೂ, ಅಲ್ಲದೆಯೂ ಉಮ್ರಾ ನಿರ್ವಹಿಸಲು ಆಗಮಿಸಲಿದ್ದಾರೆ.

error: Content is protected !! Not allowed copy content from janadhvani.com